Job Description: * ಪ್ರಸ್ತುತ ಚೆನ್ನೈನ ತಲೈವಾ ಡಾ. ಎಂ.ಜಿ. ರಾಮಚಂದ್ರನ್ ಸೆಂಟ್ರಲ್ ರೈಲ್ವೇ ನಿಲ್ದಾಣವು ಇದೀಗ ಪರಿಸರ-ಸ್ನೇಹಿ ನಿಲ್ದಾಣಗಳ ಪಟ್ಟಿಗೆ ಸೇರ್ಪಡೆಯಾಗಿದೆ. * ಈ ರೈಲ್ವೇ ನಿಲ್ದಾಣದಲ್ಲಿ 1.5 ಮೆ.ವ್ಯಾ ವಿದ್ಯುತ್'ನ್ನು ಉತ್ಪಾದಣೆ ಮಾಡುವ ಸೋಲಾರ್ ಫಲಕಗಳನ್ನು ಅಳವಡಿಸಲಾಗಿದೆ, ಈ ರೈಲ್ವೇ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಸೌರ ಫಲಕಗಳಿಂದ ಉತ್ಪಾದಣೆಯಾದ ವಿದ್ಯುತ್ ನ್ನು ಈ ರೈಲು ನಿಲ್ದಾಣವು ಹಗಲಿನ ಸಮಯದಲ್ಲಿ ಬಳಸಿಕೊಳ್ಳುತ್ತದೆ. * ಪ್ರಸ್ತುತ ರೈಲ್ವೇ ಸಚಿವಾಲಯ ಭಾರತಿಯ ರೈಲ್ವೇಗೆ ಸಂಬಂಧಿಸಿರುವ ಖಾಲಿ ಜಾಗಗಳಲ್ಲಿ ಸೌರ ಫಲಕಗಳನ್ನು ಅಳವಡಿಸಲು ನಿರ್ಧಾರವನ್ನು ಕೈಗೊಂಡಿದೆ, ಇದರಿಂದಾಗಿ ಈಗಿನ ರೈಲ್ವೇಗಳು ಹೊರಸೂಸುವ ಇಂಗಾಲದ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. * ಪ್ರಸ್ತುತ ರೇಲ್ವೆ ಇಲಾಖೆಯು ಹಲವಾರು ರೈಲು ನಿಲ್ದಾಣಗಳ ಛಾವಣಿಗಳ ಮೇಲೆ ಸೋಲಾರ್ ಫಲಕಗಳ ಅಳವಡಿಕೆಮಾಡಿದೆ, ಈ ಸೌರ ಫಲಕಗಳಿಂದ 100 MW ನಷ್ಟು ವಿದ್ಯುತ್ ಉತ್ಪಾದಣೆ ಮಾಡಲು ಆರಂಭಿಸಿದೆ. * ರೈಲ್ವೇ ಇಲಾಖೆಯು BHEL ಸಹಯೋಗದೊಂದಿಗೆ ಈ ಅಭಿಯಾನಕ್ಕೆ ಚಾಲನೆಯನ್ನು ನೀಡಿದೆ.