Job Description: * ಪ್ರಸ್ತುತ ರಕ್ಷಣಾ ಸಚಿವಾಲಯವು ಅಕ್ಟೋಬರ್. 1 ರಿಂದ ಜಾರಿಗೆ ಬರುವಂತೆ 246-ವರ್ಷಗಳಷ್ಟು ಹಳೆಯದಾದ ಕಾರ್ಖಾನೆ ಕಾರ್ಖಾನೆ ಬೋರ್ಡ್ (ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್(OFB))ನ್ನು ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್(OFB)ನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ, ಅಲ್ಲಿರುವಂತಹ ಉದ್ಯೋಗಿಗಳು ಹಾಗೂ ಆಸ್ತಿಯ ನಿರ್ವಹಣೆಯನ್ನು 7 ಸಾರ್ವಜನಿಕ ವಲಯದ ಘಟಕಗಳಿಗೆ ವರ್ಗಾವಣೆ ಮಾಡಿದೆ. * ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತ್ ಯೋಜನೆಯ ಅಂಗವಾಗಿ, ಈ ಹಿಂದಿನ ವರ್ಷವೇ ಅಂದರೆ ಮೇ. 16 ರಂದು OFBಯನ್ನು ಕಾರ್ಪೊರೇಟೈಸೇಶನ್ ಮಾಡುವ ಮೂಲಕ ಹೊಣೆಗಾರಿಕೆ ಹಾಗೂ ಯುದ್ಧ ಸಾಮಗ್ರಿಗಳ ದಕ್ಷತೆಯನ್ನು ಸುಧಾರಿಸಲ್ಲಾಗುತ್ತದೆ ಎಂದು ತಿಳಿಸಿದ್ದಾರೆ. * ಭಾರತ ಸರ್ಕಾರವು 2021 ರ ಅಕ್ಟೋಬರ್. 1 ರಿಂದ ಅನ್ವಯವಾಗುವಂತೆ, ಅಲ್ಲಿನ 41 ಉತ್ಪಾದನಾ ಘಟಕಗಳ ನಿರ್ವಹಣೆಯನ್ನು 7 ಸರ್ಕಾರಿ ಕಂಪೆನಿಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಭಾರತ ಸರ್ಕಾರದ ಆದೇಶದ ಪ್ರಕಾರ, 7 ರಕ್ಷಣಾ ಸಾರ್ವಜನಿಕ ವಲಯದ ಘಟಕಗಳಾಗಿರುವ ಮುನಿಷನ್ ಇಂಡಿಯಾ ಲಿಮಿಟೆಡ್, ಆರ್ಮರ್ಡ್ ವೆಹಿಕಲ್ಸ್ ನಿಗಮ್ ಲಿಮಿಟೆಡ್, ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್, ಟ್ರೂಪ್ ಕಂಫರ್ಟ್ಸ್ ಲಿಮಿಟೆಡ್, ಯಂತ್ರ ಇಂಡಿಯಾ ಲಿಮಿಟೆಡ್, ಇಂಡಿಯಾ ಆಪ್ಟೆಲ್ ಲಿಮಿಟೆಡ್ ಹಾಗೂ ಗ್ಲೈಡರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. * OFB ಇದೊಂದು ರಕ್ಷಣಾ ಸಚಿವಾಲಯದ ಘಟಕವಾಗಿತ್ತು, ಈ ಘಟಕವು 3 ಸಶಸ್ತ್ರ ಪಡೆಗಳು ಹಾಗೂ ಸೇನಾಪಡೆಗಳಿಗೆ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಪೂರೈಕೆ ಮಾಡುತಿತ್ತು.