Job Description: * ಇತ್ತೀಚಿಗೆ ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರಚನೆಯಾದ ತಾಲಿಬಾನ್ ಸರ್ಕಾರವು ಇದೀಗ ತನ್ನ ದೇಶದ ಎಲ್ಲಅಫ್ಘಾನ್ ಪ್ರಜೆಗಳಿಗೂ ಹೊಸ ಪಾಸ್ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿಯನ್ನು ಒದಗಿಸಲಾಗುವದು ಎಂದು ತಾಲಿಬಾನ್ ಸರ್ಕಾರ ತಿಳಿಸಿದೆ. * ಪ್ರಸ್ತುತ ಈ ತಾಲಿಬಾನ್ ಸರ್ಕಾರವು ನೀಡುವ ಹೊಸ ಪಾಸ್ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿಯಲ್ಲಿ 'ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ್' ಎಂದು ಬರೆಯಲಾಗಿರುತ್ತದೆ ಎಂದು ತಾಲಿಬಾನ್ ಸರ್ಕಾರ ತಿಳಿಸಿದೆ. * ಈ ಮೊದಲು ಆಫ್ಘಾನಿಸ್ತಾನದಲ್ಲಿನ ಆಡಳಿತದ ಸರ್ಕಾರವು ನೀಡಿರುವ ಪಾಸ್ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿಯಲ್ಲಿ 'ರಿಪಬ್ಲಿಕ್ ಆಫ್ ಅಫ್ಘಾನ್' ಎಂದು ಬರೆಯಲಾಗಿತ್ತು, ಇದೀಗ ತಾಲಿಬಾನ್ ಸರ್ಕಾರವು ನೀಡುವ ಪಾಸ್ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿಗಳು' ಮೇಲೆ 'ಇಸ್ಲಾಮಿಕ್ ಎಮಿರೇಟ್ ಆಫ್ ಅಪ್ಘಾನಿಸ್ತಾನ್' ಎಂದು ಬರೆಯಲಾಗುತ್ತದೆ ಎಂದು ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ಉಪ ಮಂತ್ರಿ ಹಾಗೂ ತಾಲಿಬಾನ್ನ ವಕ್ತಾರ ಜಬಿಯುಲ್ಲಾ ಮುಜಾಹಿದ್ ಅವರು ತಿಳಿಸಿದ್ದಾರೆ.