Job Description: * ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಪೌಷ್ಟಿಕತೆ ನಿವಾರಣೆಗೋಸ್ಕರ 35 ಹೊಸ ವಿಧದ ಬೀಜಗಳನ್ನು ಬಿಡುಗಡೆ ಮಾಡಿದರು, ಈ ಬೀಜಗಳು ಹೆಚ್ಚಿನ ಪೌಷ್ಟಿಕಾಂಶ ಮೌಲ್ಯವನ್ನು ಹಾಗೂ ಹವಾಮಾನ ಬದಲಾವಣೆಗೆ ನಿರೋಧಕವಾಗಿರುತ್ತವೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ರೈತರಿಗೆ ಈ ಹೊಸ ತಳಿಯ ಬೀಜಗಳು ರೋಗಗಳಿಂದ ಬೆಳೆಗಳನ್ನು ರಕ್ಷಣೆ ಮಾಡುತ್ತವೆ, ಹಾಗೂ ಅಧಿಕ ಇಳುವರಿಯನ್ನು ನೀಡಲಿವೆ, ಇದರಿಂದಾಗಿ ರೈತರು ಅಧಿಕ ಲಾಭವನ್ನು ಪಡೆಯಬಹುದು. * ಪ್ರಸ್ತುತ ರಬಿ ಋತುವಿನಲ್ಲಿ 430 ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ಗಳಷ್ಟು ಗೋಧಿಯನ್ನು ಖರೀದಿಸಲಾಗಿದೆ, ಇದರಿಂದ ರೈತರಿಗೆ 85 ಸಾವಿರ ಕೋಟಿ ರೂ. ಹಣವನ್ನು ಸಂದಾಯಮಾಡಲಾಗಿದೆ. * ಈ ಹೊಸ ತಳಿಯ ಬೀಜಗಳಿಂದ ರೈತರನ್ನು ಬೆಳೆ ಆಧಾರಿತ ಆದಾಯ ವ್ಯವಸ್ಥೆಯಿಂದ ಹೊರತರಲಾಗುತ್ತಿದೆ, ಹಾಗೂ ಇನ್ನಿತರ ಇತರ ಕೃಷಿಗಳಿಗೆ ಉತ್ತೇಜನವನ್ನು ನೀಡಲಾಗುತ್ತದೆ ಎಂದು ತಿಳಿದು ಬಂದಿದೆ, ಮುಂದಿನ ವರ್ಷವನ್ನು "ರಾಗಿ ವರ್ಷ" ಎಂದು ಘೋಷಣೆ ಮಾಡಿದೆ, ಅಷ್ಟೇ ಅಲ್ಲದೇ ವಿಶ್ವಸಂಸ್ಥೆ ನೀಡುವ ಅವಕಾಶಗಳನ್ನು ಜನರು ಬಳಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.