Job Description: * ಪ್ರಸ್ತುತ ಸ್ವಿಟ್ಜರ್ಲ್ಯಾಂಡ್ ದೇಶವು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು ನಿರ್ಧಾರವನ್ನು ಕೈಗೊಂಡಿದೆ, ಸ್ವಿಟ್ಜರ್ಲ್ಯಾಂಡ್ ಪಶ್ಚಿಮ ಯುರೋಪಿನ ಕೊನೆಯ ದೇಶಗಳಲ್ಲಿ ಒಂದಾಗಿದೆ. * ಸ್ವಿಟ್ಜರ್ಲ್ಯಾಂಡ್'ನ ಸರ್ಕಾರವು ಜನಾಭಿಪ್ರಾಯ ಸಂಗ್ರಹದಲ್ಲಿ ಸ್ವಿಟ್ಜರ್ಲ್ಯಾಂಡ್ನ ವಿವಾಹ ಕಾನೂನಿನ ತಿದ್ದುಪಡಿಯನ್ನು ಅನುಮೋದಿಸಿದೆ, ಹಾಗೂ ಈ ಕಾನೂನು ಸಲಿಂಗಕಾಮಿ ದಂಪತಿಗಳಿಗೆ ವೀರ್ಯ ಬ್ಯಾಂಕುಗಳಿಗೆ ಪ್ರವೇಶವನ್ನು ಒದಗಿಸಿಕೊಡುತ್ತದೆ, ಅಷ್ಟೇ ಅಲ್ಲದೇ ಸಲಿಂಗ ದಂಪತಿಗಳು ಮಕ್ಕಳನ್ನು ದತ್ತು ಪಡೆದುಕೊಳ್ಳಲು ಅವಕಾಶವನ್ನು ನೀಡುತ್ತದೆ. * ಪ್ರಸ್ತುತ ಸ್ವಿಟ್ಜರ್ಲೆಂಡ್ ದೇಶದಲ್ಲಿ ಸಲಿಂಗ ವಿವಾಹಕ್ಕೆ ವ್ಯಾಪಕ ಅನುಮೋದನೆ ಸಿಕ್ಕಿದೆ, ಹಾಗೂ ಶೇ. 64.1 ರಷ್ಟು ಮತದಾರರು ಈ ಶಾಸನ ಬದಲಾವಣೆಗೆ ಒಪ್ಪಿಗೆಯನ್ನು ನೀಡಿದ್ದಾರೆ. * ಈ ಹಿಂದೆ 2007 ರಿಂದ ಸ್ವಿಟ್ಜರ್ಲ್ಯಾಂಡ್ನಲ್ಲಿನ ಸಲಿಂಗ ದಂಪತಿಗಳು ಅಲ್ಲಿನ ನಾಗರಿಕ ಪಾಲುದಾರಿಕೆಯನ್ನು ಪಡೆದುಕೊಂಡಿದ್ದಾರೆ.