Job Description: * ಪ್ರಸ್ತುತ ಸೆಪ್ಟೆಂಬರ್. 26 ರಂದು 99 ನೇ ಮಿಲಿಟರಿ ಎಂಜಿನಿಯರಿಂಗ್ ಸೇವೆಗಳನ್ನು ಹೆಚ್ಚಿಸುವ ದಿನವನ್ನು ಆಚರಣೆ ಮಾಡಲಾಯಿತು. * ಮಿಲಿಟರಿ ಎಂಜಿನಿಯರ್ ಸೇವೆಗಳ ಬಗ್ಗೆ (MES) ಇದೊಂದು ಪ್ರಮುಖ ನಿರ್ಮಾಣ ಸಂಸ್ಥೆಯಾಗಿದೆ, ಅಷ್ಟೇ ಅಲ್ಲದೇ ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಇಂಜಿನಿಯರ್ಸ್ನ ಮುಖ್ಯವಾದ ಆಧಾರ ಸ್ತಂಭವಾಗಿದೆ, MES ಸಶಸ್ತ್ರ ಪಡೆಗಳು ಹಾಗೂ ರಕ್ಷಣಾ ಸಚಿವಾಲಯದ ಸಂಸ್ಥೆಗಳಿಗೆ ಬೆಂಬಲವನ್ನು ನೀಡುತ್ತದೆ. * MES ಭಾರತದ ಅತಿದೊಡ್ಡ ನಿರ್ಮಾಣ ಹಾಗೂ ನಿರ್ವಹಣಾ ಸಂಸ್ಥೆಯಾಗಿದೆ, MES ಭಾರತದಾದ್ಯಂತ ವಸತಿ ಹಾಗೂ ಕಚೇರಿ ಕಟ್ಟಡಗಳು, ರಸ್ತೆಗಳು, ಆಸ್ಪತ್ರೆಗಳು, ಓಡುದಾರಿಗಳು ಮತ್ತು ಸಾಗರ ರಚನೆಗಳಂತಹ ಬಹುಮುಖಿ ನಿರ್ಮಾಣ ಕಾರ್ಯಗಳ ನಿರ್ವಹಣೆಯನ್ನು ಮಾಡುತ್ತದೆ. * MES ಕೋವಿಡ್-19 ಸಂಧರ್ಭದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿದೆ, ಆ ಆಸ್ಪತ್ರೆಗೆ ಅಗತ್ಯವಿರುವ ಎಲ್ಲ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ 2021 ರ ಜನೇವರಿಯಲ್ಲಿ ಆಸ್ಪತ್ರೆಯನ್ನು ಪ್ರಾರಂಭಿಸಿದೆ. * MES ಇಂಧನ ಸಂರಕ್ಷಣೆ ಹಾಗೂ ಪರಿಸರ-ವ್ಯವಸ್ಥೆಯನ್ನು ಸುಧಾರಿಸಲು ಸೌರ ವಿದ್ಯುತ್ ಯೋಜನೆ, ಹಾಗೂ ಎಲ್ಇಡಿ-ಐಸೇಶನ್ ಅಷ್ಟೇ ಅಲ್ಲದೇ GRIHA ಎಂಬ ಹಸಿರು ಕಟ್ಟಡದ ನಿಯಮಗಳನ್ನು ಅಳವಡಿಸಿಕೊಳ್ಳುಲು ಸಿದ್ಧವಾಗಿದೆ ಎಂದು ತಿಳಿಸಿದೆ.