Job Description: * ಪ್ರಸ್ತುತ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಪಡೆಯ ಅಧಿಕಾರಿಗಳು ನೇಪಾಳದಲ್ಲಿರುವ ಮೌಂಟ್ ಮನಸ್ಲು ಪರ್ವತವನ್ನು ಅಳತೆ ಮಾಡಿದ್ದಾರೆ. * ITBP ಪಡೆಯ ಕಮಾಂಡೆಂಟ್ ರತನ್ ಸಿಂಗ್ ಸೋನಲ್ ಹಾಗೂ ಉಪ ಕಮಾಂಡೆಂಟ್ ಅನೂಪ್ ನೇಗಿ ಎಂಬ ಅಧಿಕಾರಿಗಳು ಈ ಪರ್ವತದ ಅಳತೆ ಯೋಜನೆಯ ಅಧ್ಯಕ್ಷೆತೆಯನ್ನು ವಹಿಸಿಕೊಂಡಿದ್ದರು. * ಪ್ರಸ್ತುತ ಈ ಪರ್ವತವು ವಿಶ್ವದ 8ನೇ ಅತೀ ಎತ್ತರದ ಶಿಖರವಾಗಿದೆ, ಇದು ಮನಸ್ಲು ಪರ್ವತವು 8,163 ಮೀ. ಎತ್ತರವಿದೆ ಎಂದು ITBP ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ITBP ಪಡೆಯ ಅಧಿಕಾರಿಗಳು ಇದೇ ಸೆಪ್ಟೆಂಬರ್. 7 ರಂದು ಶಿಖರ ಏರಲು ಪ್ರಾರಂಭಿಸಿದ್ದರು, ಈ ಶಿಖರದ ಎತ್ತರದ ಅಳತೆಯನ್ನು ಮಾಡುವ ಕಾರ್ಯವು ಸೆಪ್ಟೆಂಬರ್. 25 ರಂದು ಪೂರ್ಣಗೊಳಿಸಿದ್ದಾರೆ.