Job Description: * ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು (KVIC)ದ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ಅವರು ಮೊದಲ ರೇಷ್ಮೆ ನೂಲು ಉತ್ಪಾದನಾ ಕೇಂದ್ರವನ್ನು ಒಡಿಶಾ ರಾಜ್ಯದ ಕಟಕ್ ಜಿಲ್ಲೆಯ ಚೌದ್ವಾರ್ನಲ್ಲಿ ಸ್ಥಾಪನೆ ಮಾಡಲು ಉಪಕ್ರಮವನ್ನು ಪ್ರಾರಂಭಿಸಿದರು. * ಈ ಕೇಂದ್ರದಿಂದ ಟಸ್ಸಾರ್ ರೇಷ್ಮೆ ನೂಲಿನ ಸ್ಥಳೀಯ ಲಭ್ಯತೆಯನ್ನು ಹೆಚ್ಚಿಸಲಿದೆ, ರೇಷ್ಮೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ ಮತ್ತು ಅಲ್ಲಿನ ಸ್ಥಳೀಯ ಜನರಿಗೆ ಉದ್ಯೋಗವನ್ನು ಒದಗಿಸಿಕೊಡುತ್ತದೆ. * ಈ ಕೇಂದ್ರವು ವಾರ್ಷಿಕವಾಗಿ 94 ಲಕ್ಷ ಮೌಲ್ಯದ 200 ಕೆಜಿ ರೇಷ್ಮೆ ನೂಲನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ, ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. * ಒಡಿಶಾದಲ್ಲಿ ಟುಸ್ಸಾರ್ ರೇಷ್ಮೆ ನೂಲು ಉತ್ಪಾದನಾ ಕೇಂದ್ರವು ರಾಜ್ಯದ ಒಟ್ಟು ಖಾದಿ ಬಟ್ಟೆಯ ಉತ್ಪಾದನೆಯ ಸುಮಾರು 75% ರೇಷ್ಮೆಯನ್ನು ಈ ಕೇಂದ್ರವೇ ಹೊಂದಿದೆ, ರಾಜ್ಯದಲ್ಲಿನ ಈ ಕೇಂದ್ರದಿಂದಾಗಿ 34 ಮಹಿಳೆಯರು ಹಾಗೂ 50 ಕುಶಲಕರ್ಮಿಗಳಿಗೆ ನೇರ ಉದ್ಯೋಗವನ್ನು ಒದಗಿಸಿದೆ ಎಂದು ತಿಳಿಸಿದ್ದಾರೆ.