Job Description: * ಪ್ರಸ್ತುತ ಇದೇ ಸೆಪ್ಟೆಂಬರ್. 23 ರಂದು ಎಲ್ಲಾ ಕ್ರಿಪ್ಟೋಕರೆನ್ಸಿ ವಹಿವಾಟುಗಳನ್ನು ಕಾನೂನುಬಾಹಿರ ಎಂದು ಚೀನಾ ದೇಶದ ಸೆಂಟ್ರಲ್ ಬ್ಯಾಂಕ್ ಆಫ್ ಚೀನಾ ಘೋಷಣೆ ಮಾಡಿದೆ. * 2020-2021 ರ ಅವಧಿಯಲ್ಲಿ ಬಿಟ್ಕಾಯಿನ್ ಹಾಗೂ ಕ್ರಿಪ್ಟೋಕರೆನ್ಸಿಗಳ ಜಾಗತಿಕ ಮೌಲ್ಯಗಳು ಚೀನಾ ದೇಶದ ನಿಯಮಾವಳಿಗಳಿಂದಾಗಿ ಭಾರೀ ಏರಿಳಿತವನ್ನು ಕಂಡಿದ್ದವು. * ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ನೀಡಿರುವ ಮಾಹಿತಿಯ ಪ್ರಕಾರ ವರ್ಚುವಲ್ ಕರೆನ್ಸಿಯ ವ್ಯಾಪಾರ ವಹಿವಾಟವು ಕಾನೂನುಬಾಹಿರ ಹಣಕಾಸು ಚಟುವಟಿಯಾಗಿವೆ ಎಂದು ತಿಳಿಸಿದೆ. * ಕ್ರಿಪ್ಟೋ ಕರೆನ್ಸಿಯ ನಿಷೇಧದಿಂದ ಚೀನಾ ದೇಶವು ತನ್ನದೇ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸಲು ಸಿದ್ಧವಾಗಿದೆ, ಅಷ್ಟೇ ಅಲ್ಲದೇ ಚೀನಾ ದೇಶದ ಡಿಜಿಟಲ್ ಕರೆನ್ಸಿ ಇದೀಗ ಪೈಪ್ಲೈನ್ನಲ್ಲಿದೆ ಹಾಗೂ ಅದರ ವಹಿವಾಟುಗಳ ಮೇಲ್ವಿಚಾರಣೆಯನ್ನು ಮಾಡಲು ಚೀನಾದ ಸರ್ಕಾರವು ಅವಕಾಶ ನೀಡಲಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ 2019 ರಿಂದ ಕ್ರಿಪ್ಟೋ ಕರೆನ್ಸಿ ಸೃಷ್ಟಿ ಹಾಗೂ ವ್ಯಾಪಾರವು ಚೀನಾದಲ್ಲಿ ಕಾನೂನುಬಾಹಿರವಾಗಿದೆ. * ಕ್ರಿಪ್ಟೋಕರೆನ್ಸಿ ಒಂದು ಬೈನರಿ ಡೇಟಾ ಆಗಿದ್ದು, ಇದನ್ನು ವಿನಿಮಯ ಮಾಧ್ಯಮವಾಗಿ ಕೆಲಸ ಮಾಡಲು ಅಭಿವೃದ್ಧಿ ಪಡಿಸಲಾಗಿದೆ.