Job Description: * ಭಾರತ, ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಜಪಾನ್ನ ದೇಶಗಳ QUAD ನ ಸಭೆಯು ಇದೇ ಸೆಪ್ಟೆಂಬರ್ 24. ರಂದು ವಾಷಿಂಗ್ಟನ್ ಜರುಗಿತು. * ಈ QUAD ಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿಗಳಿಗೆ ಅಮೇರಿಕ ಅಧ್ಯಕ್ಷ ಜೋ ಬಿಡೆನ್ ಅವರು ಶ್ವೇತಭವನದಲ್ಲಿ ಆತಿಥ್ಯ ವಹಿಸಿದ್ದರು. * ಈ ಕ್ವಾಡ್ ಸಭೆಯಲ್ಲಿ 'ಕ್ವಾಡ್ ಲಸಿಕೆ ಉಪಕ್ರಮ' ಇಂಡೋ-ಪೆಸಿಫಿಕ್ ರಾಷ್ಟ್ರಗಳಿಗೆ ಸಹಾಯವಾಗಲಿದೆ ಎಂದು ಮೋದಿ ತಿಳಿಸಿದ್ದಾರೆ, ಅಷ್ಟೇ ಅಲ್ಲದೇ ಪಾಕಿಸ್ತಾನ ದೇಶದ ಮೇಲೆ ಎಚ್ಚರಿಕೆಯ ಕಣ್ಣಿಡಲು ಕ್ವಾಡ್'ನ ನಾಯಕರು ಸಮ್ಮತಿಯನ್ನು ನೀಡಿದರು. * ಈ ಹಿಂದೆ ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ದೇಶಗಳು ಮಾರ್ಚ್. 2021 ರ ಒಪ್ಪಂದದ ಪ್ರಕಾರ, ಭಾರತವು ಅಕ್ಟೋಬರ್. 2021 ರೊಳಗೆ ಕ್ವಾಡ್ 8 ಮಿಲಿಯನ್ ಇಂಡೋ-ಪೆಸಿಫಿಕ್ ಲಸಿಕೆ ಪ್ರಮಾಣವನ್ನು ರಫ್ತು ಮಾಡಲು ಪ್ರಸ್ತಾವನೆಯನ್ನು ನೀಡಿದೆ. * ಈ ಹಿಂದೆ 2007 ರಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಕ್ವಾಡ್ ನಾಯಕರ ಅಂದರೆ ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ದೇಶಗಳ ನಾಯಕರ ಮಾತುಕತೆಯನ್ನು ಪ್ರಾರಂಭಿಸಿದ್ದರು.