Job Description: * ಪ್ರಸ್ತುತ ಆಹಾರ ಭದ್ರತೆಯ ಒಪ್ಪಂದಕ್ಕೆ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (WFP) ಹಾಗೂ ಸೆಮಿ-ಏರಿಡ್ ಟ್ರಾಪಿಕ್ಸ್ಗಾಗಿ ಅಂತರರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ (ICRISAT) ಸಹಿ ಹಾಕಿವೆ. * ಭಾರತದಾದ್ಯಂತ ಆಹಾರ, ಪೌಷ್ಠಿಕಾಂಶ ಭದ್ರತೆ ಹಾಗೂ ಜೀವನೋಪಾಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. * ಈ ಒಪ್ಪಂದವು WFP ಹಾಗೂ ಇಕ್ರಿಸಾಟ್ ಮಧ್ಯದ ಕಾರ್ಯತಂತ್ರದ ಪಾಲುದಾರಿಕೆಯಾಗಿದೆ, ಆಹಾರ ಭದ್ರತೆಯ ದೃಷ್ಟಿಕೋನವನ್ನು ಹೊಂದಿವೆ. * ಪ್ರಸ್ತುತ 'ಅಂತರರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ ಅರೆ-ಶುಷ್ಕ ಉಷ್ಣವಲಯ'ಕ್ಕೆ ಇಕ್ರಿಸ್ಯಾಟ್ (ICRISAT) ಎನ್ನುವರು, ಇದು ಒಂದು ಗ್ರಾಮೀಣ ಅಭಿವೃದ್ಧಿಗೆ ಕೃಷಿ ಸಂಶೋಧನೆ ನಡೆಸುವ ಅಂತರಾಷ್ಟ್ರೀಯ ಸಂಸ್ಥೆಯಾಗಿದೆ, ಇದು ತನ್ನ ಪ್ರಧಾನ ಕಚೇರಿ ಹೈದರಾಬಾದ್'ನಲ್ಲಿ ಹೊಂದಿದೆ. * 1972 ರಲ್ಲಿ ಇಕ್ರಿಸ್ಯಾಟ್ (ICRISAT)ನ್ನು ಸ್ಥಾಪನೆ ಮಾಡಲಾಗಿದೆ. * ವಿಶ್ವ ಆಹಾರ ಕಾರ್ಯಕ್ರಮ(WFP)ವು ವಿಶ್ವಸಂಸ್ಥೆಯ ಆಹಾರ-ಸಹಾಯ ವಿಭಾಗ ಹಾಗೂ ವಿಶ್ವದ ಅತಿದೊಡ್ಡ ಮಾನವೀಯ ಸಂಘಟನೆಯಾಗಿದೆ, ಅಷ್ಟೇ ಅಲ್ಲದೇ ಹಸಿವು ಹಾಗೂ ಆಹಾರ ಭದ್ರತೆಗಳ ಮೇಲೆ ಕೇಂದ್ರೀಕರಿಸುವ ಸಂಸ್ಥೆ, ಹಾಗೂ ಶಾಲಾ ಊಟ ಪೂರೈಕೆದಾರ ಸಂಸ್ಥೆಯಾಗಿದೆ. * 1961 ರಲ್ಲಿ ವಿಶ್ವ ಆಹಾರ ಕಾರ್ಯಕ್ರಮ(WFP)ವನ್ನು ಸ್ಥಾಪನೆ ಮಾಡಲಾಗಿದೆ, ಇದು ತನ್ನ ಪ್ರಧಾನ ಕಚೇರಿಯನ್ನು ರೋಮ್'ನಲ್ಲಿ ಹೊಂದಿದೆ.