Job Description: * ಸಂಕೇತ(Sign) ಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಸಂಕೇತ ಭಾಷೆಗಳ ದಿನವನ್ನು ಸೆಪ್ಟೆಂಬರ್ 23 ರಂದು ಆಚರಣೆ ಮಾಡುತ್ತಾರೆ. * ಪ್ರತಿ ವರ್ಷವು ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಅಂತಾರಾಷ್ಟ್ರೀಯ ಸಂಕೇತ ಭಾಷೆಗಳ ದಿನವನ್ನು ಆಚರಣೆ ಮಾಡಲಾಗುತ್ತದೆ, ಕಿವುಡ ಜನರ ಮಾನವ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಆಚರಣೆ ಮಾಡಲಾಗುತ್ತದೆ, ಹಾಗೂ ಕಿವುಡ ಜನಗಳ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಬೇಕಾಗಿರುವ ಉತ್ತಮ ಗುಣಮಟ್ಟದ ಶಿಕ್ಷಣದ ಸೈನ್ ಭಾಷೆಯಲ್ಲಿ ಹಲವಾರು ಸೇವೆಗಳನ್ನು ನೀಡಲು ಸಿದ್ಧವಾಗಿವೆ. * ವಿಶ್ವ ಕಿವುಡರ ಒಕ್ಕೂಟವು ಅಂತಾರಾಷ್ಟ್ರೀಯ ಸಂಕೇತ ಭಾಷೆಯ ದಿನವನ್ನು 'ನಾವು ಮಾನವ ಹಕ್ಕುಗಳಿಗಾಗಿ ಸಹಿ ಮಾಡುತ್ತೇವೆ' ಎಂಬ 2021 ರ ಧ್ಯೆಯೇ ವ್ಯಾಕ್ಯದ ಅಡಿಯಲ್ಲಿ ಆಚರಿಸಲಾಗಿದೆ. * ವಿಶ್ವದಾದ್ಯಂತ ಮೊಟ್ಟಮೊದಲ ಬಾರಿ ಅಂತಾರಾಷ್ಟ್ರೀಯ ಸಂಕೇತ ದಿನವನ್ನು 2018 ರ ಸೆಪ್ಟೆಂಬರ್. 23 ರಂದು ಆಚರಣೆ ಮಾಡಲಾಗಿದೆ, ಪ್ರಸ್ತುತ ಈ ದಿನವನ್ನು ಅಂತಾರಾಷ್ಟ್ರೀಯ ಕಿವುಡರ ವಾರದ ಅಂಗವಾಗಿ ಆಚರಣೆ ಮಾಡಲಾಗುತ್ತದೆ. * ಈ ಹಿಂದೆ 1958 ರಲ್ಲಿ ಅಂತಾರಾಷ್ಟ್ರೀಯ ಕಿವುಡರ ವಾರವನ್ನು ಆಚರಿಸಲಾಗಿದೆ.