Job Description: * ಭಾರತೀಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಯೋಶಿಹಿದಾ ಸುಗಾ ಅವರು ಕ್ವಾಡ್ ಸಭೆಗೂ ಮುನ್ನ ಚರ್ಚೆಯನ್ನು ನಡೆಸಿದರು, ಈ ಚರ್ಚೆಯಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದ ಬದ್ಧತೆ ಬಗ್ಗೆ ಮಾತನಾಡಿದರು. * ಎರಡು ದೇಶಗಳ ಪ್ರಧಾನಮಂತ್ರಿಗಳು ರಕ್ಷಣಾ ಉಪಕರಣಗಳು ಹಾಗೂ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧ ಪಟ್ಟ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ವೃದ್ಧಿಸಲು ಒಪ್ಪಿಗೆಯನ್ನು ನೀಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. * ಭಾರತದ ಅತ್ಯಂತ ಮೌಲ್ಯಯುತ ಪಾಲುದಾರ ರಾಷ್ಟ್ರಗಳಲ್ಲಿ ಜಪಾನ್ ರಾಷ್ಟ್ರವು ಕೂಡ ಒಂದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.