Job Description: * ಭಾರತೀಯ ರಕ್ಷಣಾ ಇಲಾಖೆಯು 20,000 ಕೋಟಿ ರೂ. ವೆಚ್ಚದಲ್ಲಿ, 56 ಮಿಲಿಟರಿ ಸಾಗಣೆಯ ಸಿ-295 ವಿಮಾನಗಳ ಖರೀದಿಗೆ ಸ್ಪೇನ್ ಮೂಲದ ಕಂಪನಿ ಏರ್ಬಸ್ ಡಿಫೆನ್ಸ್ ಆಯಂಡ್ ಸ್ಪೇಸ್ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಿದೆ. * ಭಾರತೀಯ ವಾಯುಪಡೆ ಇದೀಗ ಅವ್ರೊ (AVRO)-748 ವಿಮಾನಗಳನ್ನು ಬಳಕೆ ಮಾಡುತ್ತಿದೆ, ಇದೀಗ ಈ ವಿಮಾನಗಳನ್ನು ಬದಲಾಯಿಸಲು ಸುಮಾರು 9 ವರ್ಷಗಳ ಹಿಂದೆಯೇ ತಾತ್ವಿಕ ಒಪ್ಪಿಗೆಯನ್ನು ನೀಡಲಾಗಿತ್ತು. * ಇತ್ತೀಚಿಗೆ ಸಚಿವ ಸಂಪುಟ ಸಮಿತಿಯು ಸಿ-295 ವಿಮಾನಗಳ ಖರೀದಿಗೆ ಒಪ್ಪಿಗೆ ನೀಡಿದೆ, ಹಾಗೂ 16 ವಿಮಾನಗಳನ್ನು 4 ವರ್ಷಗಳ ಒಳಗೆ ಕಂಪನಿಯು ಪೂರೈಸಲಿದೆ ಎಂದು ಭಾರತೀಯ ರಕ್ಷಣಾ ಸಚಿವಾಲಯದ ವಕ್ತಾರರಾದ ಎ.ಭರತಭೂಷಣ್ ಬಾಬು ಅವರು ತಿಳಿಸಿದ್ದಾರೆ. * ಪ್ರಸ್ತುತ ಭಾರತದಲ್ಲಿಯೇ ಇನ್ನಉಳಿದ 40 ವಿಮಾನಗಳನ್ನು ಏರ್ಬಸ್ ಡಿಫೆನ್ಸ್ ಆಯಂಡ್ ಸ್ಪೇಸ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಜಂಟಿಯಾಗಿ ನಿರ್ಮಾಣ ಮಾಡಲಿವೆ, ಹಾಗೂ ಮುಂದಿನ 10 ವರ್ಷಗಳಲ್ಲಿ ಈ ವಿಮಾನಗಳು ಲಭ್ಯವಾಗಲಿವೆ ಎಂದು ತಿಳಿಸಿದ್ದಾರೆ.