Job Description: * ಭಾರತ ಹಾಗೂ ಆಸ್ಟ್ರೇಲಿಯಾ ದೇಶಗಳು ಕಲ್ಲಿದ್ದಲು ಮತ್ತು ಗಣಿಗಳಲ್ಲಿ ತಮ್ಮ ಮೊದಲ ಜಂಟಿ ಕಾರ್ಯ ಗುಂಪು ಸಭೆಯನ್ನು ವರ್ಚುಲ್ ಸಭೆಯ ಮೂಲಕ ನಡೆಸಿವೆ. * ಈ ಭಾರತ-ಆಸ್ಟ್ರೇಲಿಯಾ ಜಂಟಿ ಕಾರ್ಯ ಗುಂಪು(JWG) ಸಭೆಯು ಮುಂದಿನ ಇಂಧನ ಬಗೆಗಿನ ಸಂಬಧಿಸಿದ ಪೂರ್ವಭಾವಿ ಸಭೆಯಾಗಿದೆ, ಈ ಸಭೆಯು ಅಕ್ಟೋಬರ್ 2021 ರಲ್ಲಿ ನಡೆಯಲಿದೆ. * 1941 ರಲ್ಲಿ ಸಿಡ್ನಿಯಲ್ಲಿ ಭಾರತದ ಕಾನ್ಸುಲೇಟ್ ಜನರಲ್'ನ್ನು ವ್ಯಾಪಾರ ಕಚೇರಿಯಾಗಿ ಆರಂಭಿಸುವದಾಗಿ ಸ್ವಾತಂತ್ರ್ಯ ಪೂರ್ವದಲ್ಲಿನ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪನೆ ಮಾಡಿದ್ದರು. * 1944 ರಲ್ಲಿ ಲೆಫ್ಟಿನೆಂಟ್-ಜನರಲ್ ಐವನ್ ಮ್ಯಾಕೆ ಅವರನ್ನು ಭಾರತದ ಮೊದಲ ಹೈ ಕಮೀಷನರ್ ಆಗಿ ನೇಮಕ ಮಾಡಲಾಗಿತ್ತು, ಮತ್ತೇ 1945 ರಲ್ಲಿ ಭಾರತದ ಮೊದಲ ಹೈ ಕಮಿಷನರ್ ಆಸ್ಟ್ರೇಲಿಯಾದ ಕ್ಯಾನ್ಬೆರಾಕ್ಕೆ ಆಗಮಿಸಿದ್ದರು. * ಆಸ್ಟ್ರೇಲಿಯಾ ದೇಶವು 2014 ರಲ್ಲಿ ಭಾರತದೊಂದಿಗೆ ಯುರೇನಿಯಂ ಪೂರೈಕೆ ಒಪ್ಪಂದಕ್ಕೆ ಪರಸ್ಪರ ಒಪ್ಪಿಕೊಂಡು ಸಹಿ ಹಾಕಿತ್ತು.