Job Description: * ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಜವಳಿ, ಗ್ರಾಹಕ ವ್ಯವಹಾರ ಹಾಗೂ ವಿತರಣಾ ಸಚಿವರಾದ ಪಿಯೂಷ್ ಗೋಯಲ್ ಅವರು 'ರಾಷ್ಟ್ರೀಯ ಏಕ ವಿಂಡೋ ವ್ಯವಸ್ಥೆಯನ್ನು' ಆರಂಭಿಸಿದ್ದಾರೆ, ಇದನ್ನು ಹೂಡಿಕೆದಾರರು ಮತ್ತು ವ್ಯವಹಾರಗಳಿಗಾಗಿ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. * ಈ ರಾಷ್ಟ್ರೀಯ ಏಕ ವಿಂಡೋ ವ್ಯವಸ್ಥೆಯ ನೋಂದಣಿಗಾಗಿ ಸರ್ಕಾರಿ ಕಚೇರಿಗಳ ಕಡೆಗೆ ಅಲೆದಾಡುವದನ್ನು ನಿಲ್ಲಿಸುತ್ತದೆ, ಅಷ್ಟೇ ಅಲ್ಲದೇ (Ease of doing business & Ease of living) ಈಸ್ ಆಫ್ ಡೂಯಿಂಗ್ ಮತ್ತು ಈಸ್ ಆಫ್ ಲಿವಿಂಗ್ ನ್ನು ತರಲಿದೆ ಎಂದಿದ್ದಾರೆ, ಇದರಿಂದಾಗಿ ವಿಂಡೋಸ್ನಿಂದ ಕಾಗದದ ಕೆಲಸ, ನಕಲು ಪ್ರತಿಗಳ ಅಗತ್ಯವನ್ನು ದೂರ ಮಾಡಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಈ ರಾಷ್ಟ್ರೀಯ ಏಕ ವಿಂಡೋ ವ್ಯವಸ್ಥೆಯ ಅನುಮೋದನೆ ಹಾಗೂ ಕ್ಲಿಯರೆನ್ಸ್ಗಳ ಉದ್ದೇಶಕ್ಕಾಗಿ ಹೂಡಿಕೆದಾರರ ವ್ಯವಹಾರಗಳಿಗಾಗಿ ಒಂದು ಸ್ಟಾಪ್ ಶಾಪ್ ಆಗಲಿದೆ ಎಂದಿದ್ದಾರೆ. * ಪ್ರಸ್ತುತ ಈ ಪೋರ್ಟಲ್ 18 ಕೇಂದ್ರ ಇಲಾಖೆಗಳು ಹಾಗೂ 9 ರಾಜ್ಯಗಳಲ್ಲಿ ಅನುಮೋದನೆಗಳನ್ನು ಹೊಂದಿದೆ, ಅಷ್ಟೇ ಅಲ್ಲದೇ 2021 ರ ಡಿಸೆಂಬರ್ ವೇಳೆಗೆ ಮತ್ತೇ 14 ಕೇಂದ್ರ ಇಲಾಖೆಗಳು ಹಾಗೂ 5 ರಾಜ್ಯಗಳ ಅನುಮೋದನೆಗಳನ್ನು ಪೋರ್ಟಲ್ಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಸೇರಿಸಲಾಗುತ್ತದೆ. ರಾಷ್ಟ್ರೀಯ ಏಕ ವಿಂಡೋ ವ್ಯವಸ್ಥೆಯು 'ಎಂಡ್ ಟು ಎಂಡ್' ಸೌಲಭ್ಯವನ್ನು ನೀಡುತ್ತದೆ, ಹಾಗೂ ಅರ್ಜಿದಾರರ ಡ್ಯಾಶ್ಬೋರ್ಡ್'ನ್ನು ಕೂಡ ಹೊಂದಿರಲಿದೆ ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿ ನೀಡಲು ಸಹಾಯ ಮಾಡುತ್ತದೆ. * ಈ ರಾಷ್ಟ್ರೀಯ ಏಕ ವಿಂಡೋ ವ್ಯವಸ್ಥೆಯು ಜಾಲತಾಣವು ಸಾಮಾನ್ಯ ನೋಂದಣಿ ಹಾಗೂ ರಾಜ್ಯ ನೋಂದಣಿ ನಮೂನೆಯ ಇ-ಸಂವಹನ ಮತ್ತು ದಾಖಲೆಗಳ ಸೇವೆಗಳನ್ನು ನೀಡುತ್ತದೆ.