Job Description: * ಪ್ರಸ್ತುತ ಭಾರತೀಯ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಅವರು ಮಹಿಳಾ ಏಕದಿನ ರ್ಯಾಂಕಿಂಗ್ ನ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. * ಐಸಿಸಿ(ICC) ಇತ್ತೀಚಿಗೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮಿಥಾಲಿ 762 ರ್ಯಾಂಕಿಂಗ್ ಪಾಯಿಂಟ್ ಗಳನ್ನೂ ಪಡೆದು ಅಗ್ರ ಸ್ಥಾನದಲ್ಲಿದ್ದಾರೆ. * ಈ ಮೊದಲು ಮೊದಲನೇ ಸ್ಥಾನದಲ್ಲಿದೆ ದಕ್ಷಿಣ ಆಫ್ರಿಕಾದ ಆಟಗಾರ್ತಿ ಲಿಜೆಲಿ ಲೀ ಅವರು ಇದೀಗ 2 ನೇ ಸ್ಥಾನ ದಲ್ಲಿದ್ದಾರೆ, ಹಾಗೂ ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ 7 ನೇ ಸ್ಥಾನದಲ್ಲಿದ್ದಾರೆ. * ಭಾರತದ ಜೂಲನ್ ಗೋಸ್ವಾಮಿ ಅವರು ಬೌಲಿಂಗ್ ವಿಭಾಗದಲ್ಲಿ 4 ನೇ ಸ್ಥಾನ, ಹಾಗೂ ಸ್ಪಿನ್ನರ್ ಪೂನಂ ಯಾದವ್ ಅವರು 9 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಐಸಿಸಿ(ICC) ತಿಳಿಸಿದೆ.