Job Description: * ಪ್ರಸ್ತುತ ನಡೆಯಿತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್(IPL) ಟಿ20 ಕ್ರಿಕೆಟ್ ಟೂರ್ನಿಯ ಪ್ರಸಾರವನ್ನು ತಾಲಿಬಾನಿಗಳು ಅಫ್ಗಾನಿಸ್ತಾನದಲ್ಲಿ ನಿಷೇದಿಸಿದ್ದಾರೆ. * ಇತ್ತೀಚಿಗೆ ಅಫ್ಗಾನಿಸ್ತಾನ ದೇಶವನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದುಕೊಂಡ ನಂತರ ಈ ನಿರ್ಧಾರವನ್ನು ತಗೆದುಕೊಂಡಿದ್ದಾರೆ ಅಷ್ಟೇ ಅಲ್ಲದೇ ಮಹಿಳೆಯರು ಇನ್ನು ಮುಂದೆ ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಇರುವದಿಲ್ಲ ಎಂದು ತಾಲಿಬಾನ್ ಸರ್ಕಾರ ತಿಳಿಸಿದೆ. * ಪ್ರಸ್ತುತ ಅಫ್ಗಾನಿಸ್ತಾನ ರಾಷ್ಟ್ರೀಯ TVಯು IPL ಪ್ರಸಾರವನ್ನು ನಿಷೇಧಿಸಿದೆ, ಈ ಐಪಿಎಲ್ ಪಂದ್ಯಗಳು ನಡೆಯುವ ಸಂದರ್ಭಗಳಲ್ಲಿ ಹುಡುಗಿಯರು ನರ್ತಿಸುವುದು ಹಾಗೂ ಮಹಿಳೆಯರು ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ವೀಕ್ಷಿಸುವ ಚಿತ್ರಾವಳಿಗಳು ಪ್ರಸಾರವಾಗುವ ಹಿನ್ನಲೆಯಿಂದಾಗಿ, ಈ ಬಾರಿಯ IPL ಪ್ರಸಾರವನ್ನು ನಿಷೇಧಿಸಲು ಇಸ್ಲಾಮಿಕ್ ಎಮಿರೇಟ್ಸ್ ಆಫ್ ತಾಲಿಬಾನ್ ಆದೇಶವನ್ನು ನೀಡಿದೆ ಎಂದು ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿಯ ಸುದ್ದಿ ವಾಹಿನಿಯ ವ್ಯವಸ್ಥಾಪಕರಾದ ಎಂ. ಇಬ್ರಾಹಿಮ್ ಮೊಮಾಂದ್ ಅವರು ಈ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. * ಪ್ರಸ್ತುತ ಆಫ್ಘಾನಿಸ್ತಾನದ ಆಟಗಾರರಾಗಿರುವ ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ಮುಜೀಬ್ ಉರ್ ರೆಹಮಾನ್ ಅವರು ಈ ಬಾರಿ ಯುಎಇಯಲ್ಲಿ ಜರುಗುತ್ತಿರುವ ಐಪಿಎಲ್ನಲ್ಲಿ ಆಟವಾಡುತಿದ್ದಾರೆ.