Job Description: * ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಅವಧಿಗೆ ಅಮೆರಿಕ ಪ್ರವಾಸ ಹಾಗೂ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಂಡು 76 ನೇ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಸಭೆಯಲ್ಲಿ ಚರ್ಚಿಸಲಿದ್ದಾರೆ. * ಅಮೇರಿಕ ಅಧ್ಯಕ್ಷ ಜೊ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. * ಈ ಅಮೇರಿಕ ಪ್ರವಾಸ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಕೂಡ ಭಾಗಿಯಾಗಲಿದ್ದಾರೆ. * ಅಧ್ಯಕ್ಷ ಜೊ ಬೈಡನ್ ಅವರ ಜೊತೆಗೆ ಉಗ್ರವಾದ, ಗಡಿಯಲ್ಲಿ ಭಯೋತ್ಪಾದನೆ ಹಾಗೂ ಜಾಗತಿಕ ಭಯೋತ್ಪಾದನೆ ಜಾಲವನ್ನು ನಿಗ್ರಹಿಸುವ ವಿಷಯಗಳ ಬಗ್ಗೆ ಮೋದಿ ಚರ್ಚಿಸಲಿದ್ದಾರೆ. * ಪ್ರಸ್ತುತ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳ ಸಹಯೋಗದ ಕ್ವಾಡ್ ನಾಯಕರ ಶೃಂಗಸಭೆಯಾಗಿದೆ, ಅಷ್ಟೇ ಅಲ್ಲದೇ ಇಂಡೊ-ಫೆಸಿಫಿಕ್ ಪ್ರದೇಶಗಳ ಭದ್ರತೆ, ಸಹಕಾರ, ಬೆಳವಣಿಗೆಗಳಿಗೆ ಸಮಾನ ಆಸಕ್ತಿಯ ಬಗ್ಗೆ ಒಲವು ತೋರಿಸುವ ರಾಷ್ಟ್ರಗಳಾಗಿವೆ.