Job Description: * ಪ್ರಸ್ತುತ ಭಾರತ ಸರ್ಕಾರವು ಅಪಾರ ಅನುಭವ ಹೊಂದಿದ ಪೈಲಟ್ ಏರ್ ಮಾರ್ಷಲ್ ವಿವೇಕ್ ರಾಮ್ ಚೌಧರಿಯವರನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥರ ಹುದ್ದೆಗೆ ನೇಮಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. * ಇದೇ ಸೆಪ್ಟೆಂಬರ್ 30 ರಂದು ವಾಯುಪಡೆಯ ಈಗಿನ ಮುಖ್ಯಸ್ಥರಾದ ಏರ್ಚೀಫ್ ಮಾರ್ಷಲ್ ಆರ್.ಕೆ.ಎಸ್. ಬಧೌರಿಯಾ ಅವರು ನಿವೃತ್ತಿಯಾಗಲಿದ್ದಾರೆ, ಈ ಹಿನ್ನಲೆಯಿಂದಾಗಿ ಇವರ ನಂತರದ ಸ್ಥಾನಕ್ಕೆ ಅಂದರೆ ವಾಯುಪಡೆ ಮುಖ್ಯಸ್ಥರ ಹುದ್ದೆಗೆ ವಿ.ಆರ್. ಚೌಧರಿ ಅವರನ್ನು ನೇಮಿಸಲಾಗುವದು ಹಾಗೂ ಇವರು ಈ ಹುದ್ದೆ ನಿರ್ವಹಿಸಲಿದ್ದಾರೆ ಎಂದು ಭಾರತ ಸರ್ಕಾರ ತಿಳಿಸಿದೆ. * ಪ್ರಸ್ತುತ ವಿ.ಆರ್. ಚೌಧರಿ ಅವರು ವಾಯುಪಡೆಯ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಇವರು ಮಿಗ್- 29 ಯುದ್ಧ ವಿಮಾನದ ಅನುಭವಿ ಪೈಲಟ್ ಆಗಿದ್ದಾರೆ, ಹಾಗೂ ಇವರು 1982 ರ ಡಿಸೆಂಬರ್. 29 ರಂದು ಫೈಟರ್ ಪೈಲಟ್ ಆಗಿ ಸೇವೆಗೆ ನಿಯೋಜನೆಯಾಗಿದ್ದಾರೆ. * ವಿ.ಆರ್. ಚೌಧರಿ ಅವರು 2020 ರ ಆಗಸ್ಟ್. 1 ರಿಂದ ಪಶ್ಚಿಮ ಏರ್ ಕಮಾಂಡ್ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.