Job Description: * ಪ್ರಸ್ತುತ ಭಾರತೀಯ ಅಮೆರಿಕನ್ ಆಶೀಶ್ ವಜೀರಾನಿ ಅವರನ್ನು ಪೆಂಟಗನ್ನ ಪ್ರಮುಖ ಹುದ್ದೆಗೆ ನೇಮಕ ಮಾಡಲಾಗಿದೆ. * ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ನೀಡಿರುವ ಮಾಹಿತಿಯ ಪ್ರಕಾರ ಭಾರತೀಯ ಅಮೆರಿಕನ್ ಆಶೀಶ್ ವಜೀರಾನಿ ಅವರನ್ನು ರಕ್ಷಣಾ ಇಲಾಖೆಯ ಸಿಬ್ಬಂದಿ ಮತ್ತು ಸನ್ನದ್ಧತೆ ವಿಭಾಗದ ಉಪ ಅಧೀನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದಿದ್ದಾರೆ. * ಭಾರತೀಯ ಅಮೆರಿಕನ್ ಆಶೀಶ್ ವಜೀರಾನಿ ಅವರು ಅಮೆರಿಕ ನೌಕಾಪಡೆಯಲ್ಲಿ ಸುಮಾರು 1986 ರಿಂದ 1993 ರ ವರೆಗೆ ಬೇರೆ ಬೇರೆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ, ಹಾಗೂ ಸದ್ಯ ಎ2ಒ ಸ್ಟ್ರಾಟಜೀಸ್ ಎಂಬ ಸಂಸ್ಥೆಯ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶ್ವೇತಭವನವು ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿದೆ.