Job Description: * ಪ್ರಸ್ತುತ ಕರ್ನಾಟಕ ರಾಜ್ಯ ಬೆಂಗಳೂರಿನ ಶಿವಾಜಿನಗರದಲ್ಲಿ ಮೆಟ್ರೊ ನಿಲ್ದಾಣ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ, ಪ್ರಸ್ತುತ 'ನಮ್ಮ ಮೆಟ್ರೊ' 2 ನೇ ಹಂತದ ವಿಸ್ತರಣೆ ಯೋಜನೆಯ ಸುರಂಗ ಮಾರ್ಗ ಕೊರೆಯುವ ಕೆಲಸವನ್ನು 'ಊರ್ಜಾ ಯಂತ್ರ' ಪೂರ್ಣಗೊಳಿಸಿದೆ. * ಈ ಹಿಂದೆ 2020 ರ ಜುಲೈನಲ್ಲಿ ಸುರಂಗ ಮಾರ್ಗ ಕೊರೆಯಲು 'ಊರ್ಜಾ ಯಂತ್ರ'ವು ಭೂಮಿ ಒಳಗಡೆ ಸೇರಿಕೊಂಡಿತ್ತು, ಈ ಯಂತ್ರವು ಸುಮಾರು 14 ತಿಂಗಳ ನಂತರ ಬೆಂಗಳೂರಿನ ಶಿವಾಜಿನಗರದಲ್ಲಿನ ನೆಲದಿಂದ ಹೊರ ಬಂದು ತನ್ನ ಕೆಲಸವನ್ನು ಪೂರ್ಣಗೊಳಿಸಿದೆ. * ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸುರಂಗ ಕೊರೆಯುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿಎಂಆರ್ಸಿಎಲ್(BMRCL) ಸಿಬ್ಬಂದಿಗೆ ಮತ್ತು ಕಾರ್ಮಿಕರಿಗೆ ಅಭಿನಂಧನೆಗಳನ್ನು ತಿಳಿಸಿದ್ದಾರೆ. * ಈ ಊರ್ಜಾ ಸುರಂಗ ಕೊರೆಯುವ ಯಂತ್ರವು 855 ಮೀ ಸುರಂಗ ಮಾರ್ಗವನ್ನು ಯಶಸ್ವಿಯಾಗಿ ಕೊರೆದಿದೆ.