Job Description: * ಪ್ರಸ್ತುತ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆಯನ್ನು ಡೆನ್ಮಾರ್ಕಿನ ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಷನ್ ನೀಡುತ್ತದೆ. * ಪ್ರಸ್ತುತ ಸಮುದ್ರ ತೀರಗಳ ಉತ್ತಮ ನಿರ್ವಹಣೆ, ಹಾಗೂ ಆರೋಗ್ಯಕರ ವಾತಾವರಣ ಮತ್ತು ಸಮೃದ್ಧ ಜೀವಸಂಪತ್ತಿನ ಆಧಾರದ ಮೇಲೆ ಈ ಮಾನ್ಯತೆಯನ್ನು ನೀಡಲಾಗುತ್ತದೆ, ಇದೀಗ ಭಾರತದ ಮತ್ತೇರಡು ಸಮುದ್ರ ತೀರಗಳಿಗೆ ಅಂತರರಾಷ್ಟ್ರೀಯ 'ಬ್ಲೂ ಫ್ಲ್ಯಾಗ್' ಮಾನ್ಯತೆ ಲಭಿಸಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರು ತಿಳಿಸಿದ್ದಾರೆ. * ಪ್ರಸ್ತುತ ಭಾರತದ ತಮಿಳುನಾಡು ರಾಜ್ಯದ ಕೋವಲಮ್ ಬೀಚ್ ಹಾಗೂ ಪುದುಚೆರಿಯ ಈಡೆನ್ ಬೀಚ್ಗಳು ಇದೀಗ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆಯನ್ನು ಪಡೆದುಕೊಂಡಿವೆ. * 2020 ರಲ್ಲಿ ಭಾರತದ 10 ಸಮುದ್ರ ತೀರಗಳು ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆಯನ್ನು ಪಡೆದುಕೊಂಡಿವೆ.