Job Description: * ತಾಲಿಬಾನಿಗಳು ಇದೀಗ ವಿಶ್ವಸಂಸ್ಥೆಯಲ್ಲಿ ಅಫ್ಘಾನಿಸ್ತಾನದ ಖಾಯಂ ಪ್ರತಿನಿಧಿಯಾಗಿ ಮುಹಮ್ಮದ್ ಸುಹೈಲ್ ಶಹೀನ್ ಅವರನ್ನು ನೇಮಕ ಮಾಡಿದೆ, ಹಾಗೂ ಅಪ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನದಲ್ಲಿ ಪ್ರಾತಿನಿಧ್ಯವನ್ನು ಮಂಡಿಸಿದೆ. * ಈ ಮೊದಲು ಮುಹಮ್ಮದ್ ಸುಹೈಲ್ ಶಹೀನ್ ಅವರು ಕತರ್ ನಲ್ಲಿನ ದಂಗೆಕೋರರ ಜತೆಗೆ ನಡೆದ ಶಾಂತಿ ಸಂಧಾನ ಮಾತುಕತೆಯ ಸಂಧರ್ಭದಲ್ಲಿ ವಕ್ತಾರರಾಗಿ ಕಾರ್ಯ ನಿರ್ವಹಿಸಿದ್ದರು. * ಆಫ್ಘಾನಿಸ್ತಾನದ ನೂತನ ಪ್ರತಿನಿಧಿಯಾಗಿ ಮುಂದೆ ಜರುಗುವ ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧಿವೇಶನದಲ್ಲಿ ಭಾಷಣ ಮಾಡುವಂತೆ ಮುಹಮ್ಮದ್ ಸುಹೈಲ್ ಶಹೀನ್ ಅವರಿಗೆ ತಾಲಿಬಾನ್ ಸೂಚನೆಯನ್ನು ನೀಡಿದೆ.