Job Description: * ಇತ್ತೀಚಿಗೆ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಟೆಲಿಮೆಡಿಸಿನ್ ವ್ಯವಸ್ಥೆಯಾಗಿರುವ 'ಇ-ಸಂಜೀವಿನಿ' ಪೋರ್ಟಲ್'ನ ಅಡಿಯಲ್ಲಿ 1.2 ಕೋಟಿ ಸಲಹೆಗಳನ್ನು ನೀಡಲಾಗಿದೆ. * ಪ್ರಸ್ತುತ ಕರ್ನಾಟಕ ರಾಜ್ಯವು 'ಇ-ಸಂಜೀವಿನಿ' ಪೋರ್ಟಲ್ ನ ಅಡಿಯಲ್ಲಿ 22,57,994 ಸಲಹೆಗಳನ್ನು ದ್ವಿತೀಯ ಸ್ಥಾನದಲ್ಲಿದೆ. * ಆಂಧ್ರಪ್ರದೇಶ ರಾಜ್ಯವು 'ಇ-ಸಂಜೀವಿನಿ' ಪೋರ್ಟಲ್ ನ ಅಡಿಯಲ್ಲಿ 37,04,258 ಸಲಹೆಗಳನ್ನು ನೀಡಿ ಪ್ರಥಮ ಸ್ಥಾನದಲ್ಲಿದೆ, ನಂತರದ ಸ್ಥಾನಗಳಲ್ಲಿ ತಮಿಳುನಾಡು 3 ನೇ ಸ್ಥಾನ, ಉತ್ತರ ಪ್ರದೇಶ 4 ನೇ ಸ್ಥಾನ, ಹಾಗೂ ಇನ್ನ ಉಳಿದ ಗುಜರಾತ್, ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಕೇರಳ, ರಾಜ್ಯಗಳು ಇ-ಸಂಜೀವಿನಿ ಜಾಲತಾಣವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. * ಪ್ರಸ್ತುತ ಕೇಂದ್ರ ಸರ್ಕಾರವು ಕೋವಿಡ್-19 ಸಂಧರ್ಭದಲ್ಲಿ ಹಿರಿಯ ನಾಗರಿಕರಿಗೆ ದೂರವಾಣಿ ಮುಕಾಂತರ ಆರೋಗ್ಯ ಸಮಸ್ಯೆಗಳಿಗೆ ವೈದ್ಯಕೀಯ ಸಲಹೆ ಹಾಗೂ ಪರಿಹಾರವನ್ನು ಪಡೆಯಲು ಈ 'ಇ-ಸಂಜೀವಿನಿ’ ವ್ಯವಸ್ಥೆಯನ್ನು ಆರಂಭಿಸಿದೆ.