Job Description: * ಪ್ರಸ್ತುತ ಸೌದಿ ಅರೇಬಿಯಾದ ವಿದೇಶಾಂಗ ಸಚಿವರಾಗಿರುವ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಅವರು ಭಾರತೀಯ ಪ್ರಧಾನಿ ಮೋದಿ ಅವರನ್ನು ಭೇಟಿ ಮಾತುಕತೆ ನಡೆಸಿದ್ದಾರೆ, ಅದೇ ಸಂಧರ್ಭದಲ್ಲಿ ಸದ್ಯ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯ ಬಗ್ಗೆಯು ಕೂಡ ಮಾತುಕತೆಯನ್ನು ನಡೆಸಿದ್ದಾರೆ. * ಈ ಮಾತುಕತೆಯಲ್ಲಿ ಉಭಯ ದೇಶಗಳ ನಾಯಕರು ರಕ್ಷಣಾ ವಲಯ, ವ್ಯಾಪಾರ, ಹೂಡಿಕೆ, ಇಂಧನ ಕ್ಷೇತ್ರಗಳ ದ್ವಿಪಕ್ಷೀಯ ಉಪಕ್ರಮಗಳಲ್ಲಿ ಆಗುತ್ತಿರುವ ಅಭಿವೃದ್ಧಿ ವಿಷಯಗಳ ಬೆಗ್ಗೆ ಚರ್ಚಿಸಿದ್ದಾರೆ. * ಸದ್ಯ ಭಾರತವು ಸೌದಿ ಅರೇಬಿಯಾದಿಂದ ಇಂಧನ, ರಕ್ಷಣಾ ಉತ್ಪಾದನೆ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಯನ್ನು ಬಯಸುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.