Job Description: * ಪ್ರಸ್ತುತ 107 ವರ್ಷ ಹಾಗೂ 330 ದಿನಗಳ ವಯಸ್ಸಿನ ಇಬ್ಬರು ಸಹೋದರಿಯರು ವಿಶ್ವದ ಅತ್ಯಂತ ಹಿರಿಯ ಅವಳಿ ಜೀವಗಳೆಂದು ವಿಶ್ವ ಗಿನ್ನೆಸ್ ದಾಖಲೆಯನ್ನು ಬರೆದಿದ್ದಾರೆ, ಹಾಗೂ ಇವರು ಮೂಲತಃ ಇವರು ಜಪಾನ್ ದೇಶದವರಾಗಿದ್ದರೆ. * ಪ್ರಸ್ತುತ ಜಪಾನಿನ ರಾಷ್ಟ್ರೀಯ ರಜಾ ದಿನವನ್ನು ವೃದ್ಧರ ದಿನಾಚರಣೆಯಂದು ಈ ಘೋಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. * ಜಪಾನ್ ಮೂಲದ ಉಮೆನೊ ಸುಮಿಯಮಾ ಹಾಗೂ ಕೌಮೆ ಕೊಡಮಾ ಎಂಬ ಈ ಅವಳಿ ಸಹೋದರಿಯರು 1913 ರ ನವೆಂಬರ್ 5 ರಂದು ಪಶ್ಚಿಮ ಜಪಾನ್ನ ಶೋಡೋಶಿಮಾ ದ್ವೀಪದಲ್ಲಿ ಜನಿಸಿದ್ದಾರೆ. * ಈ ಹಿಂದೆ ಜಪಾನಿನಲ್ಲಿ 107 ವರ್ಷಗಳು ಮತ್ತು 175 ದಿನಗಳು ಬದುಕಿರುವ ಕಿನ್ ನರಿಟಾ ಮತ್ತು ಜಿನ್ ಕಾನಿ ಎಂಬ ಅವಳಿ ಸಹೋದರಿಯರ ದಾಖಲೆಯನ್ನು ಮುರಿದಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಲಿಮಿಟೆಡ್ ಮಾಹಿತಿ ನೀಡಿದೆ. * ಪ್ರಸ್ತುತ ಜಪಾನ್ ದೇಶದಲ್ಲಿ 12.50 ಕೋಟಿ ಜನಸಂಖ್ಯೆ ಇದೇ, ಹಾಗೂ ಈ ದೇಶವು ವಿಶ್ವದಲ್ಲಿ ಅತ್ಯಂತ ವೇಗವಾಗಿ ವಯಸ್ಸಾದ ಜನಸಂಖ್ಯೆ ಹೊಂದುತ್ತಿರುವ ದೇಶವಾಗಿದೆ ಎಂದು ತಿಳಿದು ಬಂದಿದೆ. * ಜಪಾನ್ ದೇಶದಲ್ಲಿ ಜನಸಂಖ್ಯೆಯ ಶೇ. 29 ರಷ್ಟು ಜನರು 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದಾರೆ ಎಂದು ಅಲ್ಲಿನ ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.