Job Description: * ಪ್ರಸ್ತುತ ಚೀನಾ ದೇಶದ ಮಾನವ ರಹಿತ ಸರಕು ಹೊತ್ತ ಸಾಗುವ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ, ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಚೀನಾದ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಮಗ್ರಿಗಳನ್ನೂ ರವಾನಿಸಲು ಈ ನೌಕೆಯನ್ನು ಬಳಸಲಾಗಿದೆ. * ಚೀನಾ ದೇಶದ ಲಾಂಗ್ ಮಾರ್ಚ್ -7 ವೈ 4 ರಾಕೆಟ್ ಟಿಯಾನ್ಜೌ-3 ಎಂಬ ನೌಕೆಯನ್ನು ಹೊತ್ತ ಹೈನಾನ್ನ ದಕ್ಷಿಣ ದ್ವೀಪ ಪ್ರಾಂತ್ಯದ ವೆಂಚಾಂಗ್ ಬಾಹ್ಯಾಕಾಶ ಉಡಾವಣಾ ಸ್ಥಳದಿಂದ ಉಡಾವಣೆ ಯಾಗಿದೆ ಎಂದು ಚೀನಾದ ಮಾನವ ಸಹಿತ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ. * ಮುಂದಿನ ವರ್ಷದ ಅವಧಿಗೆ ಸಿದ್ಧಗೊಳ್ಳಲಿರುವ ಬಾಹ್ಯಾಕಾಶ ನಿಲ್ದಾಣ ಕೇಂದ್ರಕ್ಕೆ ಸಾಮಗ್ರಿಗಳನ್ನು ರವಾನಿಸಲು ಈ ಟಿಯಾನ್ಜೌ ನೌಕೆಯು ಬಳಸಲಾಗುತ್ತಿದೆ.