Job Description: * ಪ್ರಸ್ತುತ ಭಾರತೀಯ ರೈಲ್ವೆ ಪ್ರಧಾನ ಮಂತ್ರಿ ಕೌಶಲ್ ವಿಕಾಸ ಯೋಜನೆ ಅಡಿಯಲ್ಲಿ 'ರೈಲ್ ಕೌಶಲ್ ವಿಕಾಸ್ ಯೋಜನೆ' ಪ್ರಾರಂಭಿಸಿದೆ, ಈ ಯೋಜನೆಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಿದರು. * ಈ ಯೋಜನೆಯಿಂದ ಭಾರತದಾದ್ಯಂತ 75 ರೈಲ್ವೆ ತರಬೇತಿ ಸಂಸ್ಥೆಗಳ ಸಹಯೋಗದೊಂದಿಗೆ ಉದ್ಯಮಕ್ಕೆ ಸಂಬಂಧಪಟ್ಟ ಕೌಶಲ್ಯಗಳಲ್ಲಿ ರೈಲ್ವೇಗೆ ಪ್ರವೇಶದ ತರಬೇತಿಯನ್ನು ನೀಡುತ್ತದೆ. * ಈ 'ರೈಲ್ ಕೌಶಲ್ ವಿಕಾಸ್ ಯೋಜನೆ'ಯು ಸುಮಾರು 50 ಸಾವಿರ ಯುವಕರಿಗೆ ತರಬೇತಿ ನೀಡಲಿದೆ, ಹಾಗೂ ಈ ಮಿಷನ್ ಯುವಕರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಅಲ್ಲದೇ ಸ್ವಯಂ ಉದ್ಯೋಗಿಗಳ ಕೌಶಲ್ಯಗಳಿಗೆ ಒಟ್ಟು ನೀಡುತ್ತದೆ. * ಈ 'ರೈಲ್ ಕೌಶಲ್ ವಿಕಾಸ್ ಯೋಜನೆ'ಯು 3 ವರ್ಷಗಳ ಸಮಯದಲ್ಲಿ 50,000 ಅಭ್ಯರ್ಥಿಗಳಿಗೆ ತರಬೇತಿ ನೀಡಲಿದೆ, ಆರಂಭದಲ್ಲಿ 1000 ಅಭ್ಯರ್ಥಿಗಳಿಗೆ ತರಬೇತಿ ನೀಡಲಿದೆ. * ಪ್ರಸ್ತುತ ಈ ಯೋಜನೆ ಅಡಿಯಲ್ಲಿ ಯುವಕರಿಗೆ ಎಲೆಕ್ಟ್ರಿಷಿಯನ್, ವೆಲ್ಡರ್, ಮೆಷಿನಿಸ್ಟ್ ಹಾಗೂ ಫಿಟ್ಟರ್ ಈ 4 ಟ್ರೇಡ್ಗಳಲ್ಲಿ ತರಬೇತಿ ನೀಡಲಿದೆ, 10 ನೇ ತರಗತಿ ಉತ್ತೀರ್ಣವಾಗಿರುವ ಸುಮಾರು 18-35 ವರ್ಷದ ಅಭ್ಯರ್ಥಿಗಳು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.