Job Description: * ಪ್ರಸ್ತುತ ಸಂಶೋಧಕ ಎಸ್.ನಟರಾಜ ಬೂದಾಳು ಅವರ 'ಸರಹಪಾದ' ಕೃತಿಯು ಕನ್ನಡ ವಿಭಾಗದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯು ಅನುವಾದಿತ ಕೃತಿಗೆ ನೀಡುವ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದೆ. * ಪ್ರಸ್ತುತ ಈ ಅಕಾಡೆಮಿಯ ಅಧ್ಯಕ್ಷರಾಗಿರುವ ಡಾ.ಚಂದ್ರಶೇಖರ ಕಂಬಾರ ಅವರ 'ಶಿಖರ ಸೂರ್ಯ' ಕೃತಿಯ ಮಲಯಾಳಂ ಅನುವಾದದ 'ಶಿಖರಸೂರ್ಯನ್' ಕೃತಿಯು ಪ್ರಶಸ್ತಿಗೆ ಆಯ್ಕಯಾಗಿದೆ. * ಕನ್ನಡದ ವಿವೇಕ್ ಶಾನಭಾಗ್ ಅವರ 'ಘಾಚಾರ್ ಘೋಚಾರ್' ಕೃತಿಯು ಇಂಗ್ಲಿಷ್ಗೆ ಅನುವಾದ ಹಾಗೂ ಗೋಪಾಲಕೃಷ್ಣ ಪೈ ಅವರ 'ಸ್ವಪ್ನ ಸಾರಸ್ವತ' ಕೃತಿಯು ಕೊಂಕಣಿಗೆ ಅನುವಾದ, ಅಲ್ಲದೇ ಶಾಂತಿನಾಥ ದೇಸಾಯಿ ಅವರ 'ಓಂ ಣಮೋ' ಕೃತಿಯು ತೆಲುಗಿಗೆ ಅನುವಾದವಾಗಿರುವ ಈ ಎಲ್ಲ ಕೃತಿಗಳು ಕನ್ನಡ ಮೂಲದ ಕೃತಿಗಳಾಗಿವೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಭಾರತದ 24 ಭಾಷೆಗಳ ಅನುವಾದಿತ ಕೃತಿಗಳು ಈ ಪ್ರಶಸ್ತಿಗೆ ಆಯ್ಕೆಯಾಗಿವೆ, ಈ ಪ್ರಶಸ್ತಿ 50,000 ರೂ. ನಗದು ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿರಲಿದೆ ಎಂದು ತಿಳಿಸಿದ್ದಾರೆ.