Job Description: * ಪ್ರಸ್ತುತ ಭಾರತ ಹಾಗೂ ಎಲ್ ಸಾಲ್ವಡಾರ್ ನಡುವೆ ಇತ್ತೀಚಿಗೆ ಸ್ಯಾನ್ ಸಾಲ್ವಡಾರ್ ನಲ್ಲಿ 3ನೇ ವಿದೇಶಾಂಗ ಕಚೇರಿ ಸಮಾಲೋಚನೆಗಳನ್ನು ಜರುಗಿದವು. * ಈ ಸಭೆಯ ನೇತೃತ್ವವನ್ನು ಭಾರತದ ಕಾರ್ಯದರ್ಶಿ ರಿವಾ ಗಂಗೂಲಿ ದಾಸ್ ಹಾಗೂ ಎಲ್ ಸಾಲ್ವಡೋರನ್ ವಿದೇಶಾಂಗ ವ್ಯವಹಾರಗಳು ರಾಯಭಾರಿ ಅಡ್ರಿಯಾನಾ ಮರಿಯಾ ಅವರು ವಹಿಸಿಕೊಂಡಿದ್ದರು. * ಈ ಸಭೆಯಲ್ಲಿ ಆರೋಗ್ಯ, ವ್ಯಾಪಾರ ಮತ್ತು ಹೂಡಿಕೆ, ಪ್ರವಾಸೋದ್ಯಮ, ಇಂಧನ, ಜಲಕೃಷಿ, ಸಾರಿಗೆ, ವಾಯುಯಾನ ಮತ್ತು ಮೂಲಸೌಕರ್ಯ, ಕ್ಷೇತ್ರಗಳ ಅಭಿವೃದ್ಧಿ ಹೀಗೆಎಲ್ಲಾ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿನೇ ಮಾಡಿದರು, ಅಲ್ಲದೆ ಉಭಯ ದೇಶಗಳು ಸಾರ್ವಜನಿಕ ರಾಜತಾಂತ್ರಿಕ ಕ್ಷೇತ್ರದಲ್ಲಿ ಅಭ್ಯಾಸ, ವಿಚಾರಗಳನ್ನೂ ವಿನಿಮಯ ಮಾಡಿಕೊಳ್ಳಲು ಬದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ. * ಪ್ರಸ್ತುತ 1979 ರ ಫೆಬ್ರವರಿ.12 ರಂದು ಈ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪನೆ ಮಾಡಲಾಗಿದೆ, ಪ್ರಸ್ತುತ ನವದೆಹಲಿಯಲ್ಲಿ ಎಲ್ ಸಾಲ್ವಡಾರ್ ತನ್ನ ರಾಯಭಾರ ಕಚೇರಿಯನ್ನು ಹೊಂದಿದೆ, ಹಾಗೂ ಭಾರತದ ರಾಯಭಾರ ಕಚೇರಿಯು ಸ್ಯಾನ್ ಸಾಲ್ವಡಾರ್ ಗ್ವಾಟೆಮಾಲಾದಲ್ಲಿದೆ. * ಭಾರತ-ಎಲ್ ಸಾಲ್ವಡಾರ್ ಎರಡೂ ದೇಶಗಳ ಆಯಾ ವಿದೇಶಿ ಸಚಿವಾಲಯಗಳು ಹಲವಾರು ಸಮಾಲೋಚನೆಗಳನ್ನೂ ನಡೆಸಿದ ನಂತರ 2004 ರ ಫೆಬ್ರವರಿಯಲ್ಲಿ ಒಪ್ಪಂದದ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದವು, ಮತ್ತೇ 2012 ರಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದವು.