Job Description: * ವಿಶ್ವದಾದ್ಯಂತ ಪ್ರತಿವರ್ಷವು ಸೆಪ್ಟೆಂಬರ್ 16 ರಂದು ವಿಶ್ವ ಓಜೋನ್ ದಿನ ಅಥವಾ ಓಜೋನ್ ಪದರ ಸಂರಕ್ಷಣೆಗಾಗಿ ಅಂತರಾಷ್ಟ್ರೀಯ ದಿನವನ್ನು ಆಚರಣೆ ಮಾಡುತ್ತಾರೆ. * ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1994 ರಲ್ಲಿ ಮಾಂಟ್ರಿಯಲ್ ಪ್ರೋಟೋಕಾಲ್ ಗೆ ಸಹಿ ಹಾಕಿದ ನಂತರ ವಿಶ್ವ ಓಜೋನ್ ದಿನವನ್ನು ಘೋಷಣೆ ಮಾಡಿದೆ, ನಂತರ ಪ್ರತಿಯೊಂದು ದೇಶವು ಓಜೋನ್ ಪದರವನ್ನು ಸವೆಯುವ ಪದಾರ್ಥಗಳ ಮೇಲೆ ಮಾಂಟ್ರಿಯಲ್ ಪ್ರೋಟೋಕಾಲ್ ನ್ನು 1987 ರಲ್ಲಿ ಸಹಿ ಹಾಕಿವೆ. *ಪ್ರಸ್ತುತ 'ಮಾಂಟ್ರಿಯಲ್ ಪ್ರೋಟೋಕಾಲ್ - ನಮ್ಮನ್ನು, ನಮ್ಮ ಆಹಾರ ಮತ್ತು ಲಸಿಕೆಗಳನ್ನು ತಂಪಾಗಿರಿಸುವುದು' ಎನ್ನುವುದು 2021 ನೇ ವರ್ಷದ ಧ್ಯೆಯೇ ವ್ಯಾಕ್ಯವಾಗಿದೆ, ಅಲ್ಲದೇ ವಿಶ್ವಸಂಸ್ಥೆಯ 197 ಸದಸ್ಯರಿಂದ ಅಂಗೀಕರಿಸಲಾಗಿರುವ ಮೊದಲ ಪ್ರೋಟೋಕಾಲ್ ಇದಾಗಿದೆ. * ಈ ಹಿಂದೆ 2019 ರಲ್ಲಿ ಭಾರತದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆಯ ಸಚಿವಾಲಯವು 'ಇಂಡಿಯಾ ಕೂಲಿಂಗ್ ಆಕ್ಷನ್ ಪ್ಲಾನ್'ನ್ನು ಆರಂಭಿಸಿದೆ. * ಮಾಂಟ್ರಿಯಲ್ ಪ್ರೋಟೋಕಾಲ್ ಎಂಬುವದು ತಂಪಾಗಿಸುವಿಕೆ ಹಾಗೂ ಶೈತ್ಯೀಕರಣದ ಉದ್ದೇಶಗಳಿಗಾಗಿ ವ್ಯಾಪಕವಾಗಿ ಬಳಸುತ್ತಿರುವ ಕ್ಲೋರೊಫ್ಲೋರೋಕಾರ್ಬನ್ ಏರೋಸಾಲ್ಗಳು, ಹಾಲೋನ್ಗಳು ಎಲ್ಲಾ ಓಜೋನ್-ಖಾಲಿಯಾದ ಪದಾರ್ಥಗಳ ಅಸ್ತಿತ್ವವನ್ನು ತಡೆಯಲು ದೇಶಗಳಿಗೆ ಒಪ್ಪಂದವಾಗಿದೆ. * ಹಾನಿಕಾರಕ ಪದಾರ್ಥಗಳ ಬಳಕೆಯಿಂದಾಗಿ ಅಂಟಾರ್ಟಿಕಾದಲ್ಲಿ ಓಜೋನ್ ಪದರಗಳಲ್ಲಿ ರಂಧ್ರವನ್ನು ಮಾಡಿದೆ ಎಂದು 1970 ರಲ್ಲಿ ಕಂಡುಹಿಡಿಯಲಾಗಿದೆ.