Job Description: * ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ಕ್ಕೆ ಇದೀಗ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ರಾಷ್ಟ್ರೀಯ ಎಕ್ಸೆಲೆನ್ಸ್ 5 ಪ್ರಶಸ್ತಿಗಳು ಲಭಿಸಿವೆ, ಎಂದು KSRTC ನ ಮುಖ್ಯ ಸಾರ್ವಜನಿಕ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. * ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯು, KSRTC ಗೆ ಸಾರ್ವಜನಿಕ ಸಂಪರ್ಕ ಕ್ಷೇತ್ರಗಳ ಉಪಕ್ರಮಗಳನ್ನು ಪರಿಗಣಿಸಿ ನೀಡುವ ಪಿ ಆರ್ ಸಿ ಐ ಎಕ್ಸಲೆನ್ಸ್ ಪ್ರಶಸ್ತಿಯ 5 ವರ್ಗಗಳಲ್ಲಿ ಲಭಿಸಿವೆ ಎಂದು ತಿಳಿಸಿದ್ದಾರೆ. - ಸಾರ್ವಜನಿಕ ವಲಯದಲ್ಲಿ ಕೋವಿಡ್ ನಿರ್ವಹಣೆಗಾಗಿ - ಬೆಳ್ಳಿ ಪದಕ - ಅತ್ಯುತ್ತಮ ಸಾರ್ವಜನಿಕ ಉದ್ದಿಮೆ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಉಪ ಕ್ರಮಕ್ಕಾಗಿ ಕಂಚಿನ ಪದಕ - ಆರೋಗ್ಯ ರಕ್ಷಣೆ ಸಂವಹನದ ಸಾಕ್ಷ್ಯ ಚಿತ್ರಗಳಿಗಾಗಿ ಕಂಚಿನ ಪದಕ - ಪ್ರಾದೇಶಿಕ ಸಾರಿಗೆ ಸಂಪದಕ್ಕಾಗಿ ಚಿನ್ನದ ಪದಕ - ಕೋವಿಡ್-19 ಸಮಯದಲ್ಲಿ ನೂತನ ಗ್ರಾಹಕ ಸ್ನೇಹಿ ಉಪಕ್ರಮದ ಅಡಿಯಲ್ಲಿ ಚಿನ್ನದ ಪದಕ ಲಭಿಸಿದೆ, ಇತ್ತೀಚಿಗೆ ಅಂದರೆ ಇದೇ ಸೆಪ್ಟೆಂಬರ್. 18 ರಂದು ಗೋವಾದಲ್ಲಿ ನಡೆದ 15 ನೇ ವಿಶ್ವ ಸಾರ್ವಜನಿಕ ಸಂಪರ್ಕ ಮಂಡಳಿಯ ಕಾರ್ಯಕ್ರಮದಲ್ಲಿ ಗೋವಾದ ಕಲೆ ಹಾಗೂ ಸಂಸ್ಕೃತಿ ಬುಡಕಟ್ಟು ಕಲ್ಯಾಣ ಸಚಿವ ಗೋವಿಂದ ಗೌಡರವರು ಈ ಎಲ್ಲ ಪ್ರಶಸ್ತಿಗಳನ್ನು KSRTC ಗೆ ನೀಡಿದರು.