Job Description: * ಪ್ರಸ್ತುತ ನೀತಿ ಆಯೋಗವು 'ಭಾರತದಲ್ಲಿ ನಗರ ಯೋಜನಾ ಸಾಮರ್ಥ್ಯವನ್ನು ನಿರ್ಮಿಸುವುದು' ಮಾಹಿತಿಯನ್ನು ನಗರ ಯೋಜನೆಯ ಹಲವಾರು ವಿಷಯಗಳ ಬಗ್ಗೆ ಶಿಫಾರಸುಗಳ ಗುಂಪನ್ನು ಹೊಂದಿದೆ. * ಆರೋಗ್ಯಕರ ನಗರಗಳನ್ನು ನಿರ್ಮಿಸಲು ಸಲಹೆಗಳು: - ಆರೋಗ್ಯಕರ ನಗರಗಳನ್ನು ಯೋಜಿಸಲು ಮಧ್ಯಸ್ಥಿಕೆಗಳು - ನಗರ ಪ್ರದೇಶದ ಅತ್ಯುತ್ತಮ ಬಳಕೆ - ಮಾನವ ಸಂಪನ್ಮೂಲ ಸಾಮರ್ಥ್ಯಗಳನ್ನು ಹೆಚ್ಚಿಸುವುದು - ನಗರ ಆಡಳಿತವನ್ನು ಬಲಪಡಿಸುವುದು - ಸ್ಥಳೀಯ ನಾಯಕತ್ವವನ್ನು ನಿರ್ಮಿಸುವುದು - ಖಾಸಗಿ ವಲಯದ ಪಾತ್ರವನ್ನು ಹೆಚ್ಚಿಸುವುದು ಮತ್ತು ನಗರ ಯೋಜನೆ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದು. * ಆರೋಗ್ಯಕರ ನಗರಗಳನ್ನು ನಿರ್ಮಿಸಲು ಸಲಹೆಗಳ ಪ್ರಕಾರ ಮುಂಬರುವ 5 ವರ್ಷಗಳಲ್ಲಿ ಭಾರತಕ್ಕೆ 500 'ಆರೋಗ್ಯಕರ ನಗರಗಳನ್ನು' ನಿರ್ಮಿಸಲು ಕೇಂದ್ರೀಯ ಯೋಜನೆಯ ಅಗತ್ಯವಿದೆ ಹಾಗೂ ರಾಜ್ಯಗಳಲ್ಲಿ ಪಟ್ಟಣ-ಯೋಜನೆ ಕಾಯಿದೆಗಳ ಪರಿಷ್ಕರಣೆ ಅಗತ್ಯವಿದೆ ಎಂದು ನೀತಿ ಆಯೋಗವು ತಿಳಿಸಿದೆ. * ಕೇಂದ್ರ ವಲಯದ ಯೋಜನೆಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಭಾಗಿವತ್ವದಲ್ಲಿ 500 ಆರೋಗ್ಯಕರ ನಗರಗಳನ್ನು ನಿರ್ಮಿಸುವ ಕಾರ್ಯವನ್ನು ಆರಂಭಿಸಬೇಕು ಎಂದು ನೀತಿ ಆಯೋಗ ತಿಳಿಸಿದೆ. * ಈ ಹಿಂದೆ 2020 ರ ಅಕ್ಟೋಬರ್ ನಲ್ಲಿ ನೀತಿ ಆಯೋಗವು ಭಾರತದಲ್ಲಿ ನಗರ ಯೋಜನಾ ಶಿಕ್ಷಣದಲ್ಲಿ ಸುಧಾರಣೆಗಳುನ್ನು ಪರಿಶೀಲಿಸುವ ಸಲಹಾ ಸಮಿತಿಯನ್ನು ರಚನೆ ಮಾಡಿದೆ.