Job Description: * ಪ್ರಸ್ತುತ ಪಂಜಾಬ್ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ(EV) ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆ ಮಾಡಲು ಪಂಜಾಬ್ ಎನರ್ಜಿ ಡೆವಲಪ್ಮೆಂಟ್ ಏಜೆನ್ಸಿ (PEDA) ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ (CESL) ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. * ಪಂಜಾಬ್ ಎನರ್ಜಿ ಡೆವಲಪ್ಮೆಂಟ್ ಏಜೆನ್ಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವಜೋತ್ ಪಾಲ್ ಸಿಂಗ್ ರಾಂಧವಾ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ, ಹಾಗೂ ಈ ಒಪ್ಪಂದವು ಪಂಜಾಬ್ ರಾಜ್ಯದಲ್ಲಿ ಕೈಗೆಟುಕುವ ಚಾರ್ಜಿಂಗ್ ಮೂಲಸೌಕರ್ಯವನ್ನು ಒದಗಿಸಲು ನಿಟ್ಟಿನಲ್ಲಿ ಈ EV ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿದೆ. * ಪ್ರಸ್ತುತ ಈ EV ಕೇಂದ್ರಗಳಿಂದ ಎರಡು, ಮೂರು, ನಾಲ್ಕು ಚಕ್ರದ ಇ-ವಾಹನಗಳ(EV) ಅಳವಡಿಕೆಯನ್ನು ಉತ್ತೇಜಿಸುತ್ತಿದೆ. * ಪಂಜಾಬ್ ಇಂಧನ ಅಭಿವೃದ್ಧಿ ಸಂಸ್ಥೆಯು ನವೀಕರಿಸಬಹುದಾದ ಇಂಧನ ಸಂರಕ್ಷಣಾ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ನೋಡಲ್ ಏಜೆನ್ಸಿಯಾಗಿ PEDA ನ್ನು1991 ರಲ್ಲಿ ಸ್ಥಾಪನೆ ಮಾಡಿದೆ, ಮತ್ತೇ 1860 ರ ಸೊಸೈಟಿಗಳ ಕಾಯ್ದೆಯ ಅಡಿಯಲ್ಲಿ PEDA ನ್ನು ಸೊಸೈಟಿಯಾಗಿ ನೊಂದಣಿ ಮಾಡಲಾಯಿತು ಎಂದು ತಿಳಿಸಿದೆ.