Job Description: * ಪ್ರಸ್ತುತ ಭಾರತೀಯ ವಾಯುಪಡೆ (IAF) ಮಿರಾಜ್ -2000 ಯುದ್ಧ ವಿಮಾನಗಳ ಸಮೂಹವನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ ಫ್ರೆಂಚ್ ವಾಯುಪಡೆಯ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಭಾರತೀಯ ಸರ್ಕಾರವು ಮಾಹಿತಿ ನೀಡಿದೆ. * ಫ್ರೆಂಚ್ ಮಿರಾಜ್ ಜೆಟ್ಗಳ ಸ್ಕ್ವಾಡ್ರನ್ ನ್ನು ಈ ಹಿಂದೆ ಸ್ಥಗಿತಗೊಳಿಸಲಾಯಿತು. ಆಗಸ್ಟ್ 31 ರಂದು, ಈ 50-ಮಿರಾಜ್ -2000 ರ ಸೇವಾ ಸಾಮರ್ಥ್ಯವನ್ನು ಸುಧಾರಿಸಲು ಬಿಡಿಭಾಗಗಳು ಹಾಗೂ ಏರ್ಫ್ರೇಮ್ ಸಾಮರ್ಥ್ಯವನ್ನು ಸುಧಾರಿಸುವ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದಕ್ಕೆ ಭಾರತೀಯ ವಾಯುಪಡೆ ಸಹಿ ಹಾಕಿದೆ ಎಂದು ತಿಳಿದು ಬಂದಿದೆ. * ಭಾರತೀಯ ವಾಯುಪಡೆ ಖರೀದಿಸುವ ಯಾವುದೇ ವಿಮಾನವನ್ನು ಹಾರಾಟಕ್ಕೆ ಬಳಕೆ ಮಾಡುವದಿಲ್ಲ ಎಂದು ತಿಳಿಸಿದೆ, ಈ ಮೊದಲು ಭಾರತವು ಕಳೆದ ವರ್ಷ ಗ್ವಾಲಿಯರ್ಗೆ ತಲುಪಿದ್ದ ಹಳೆಯ ಮಿರಾಜ್ಗಳನ್ನು ಪೂರೈಸಲು ಫ್ರೆಂಚ್ ಕಂಪನಿಗಳೊಂದಿಗೆ ಒಪ್ಪಂದಕ್ಕೆವನ್ನು ಮಾಡಿಕೊಂಡಿತ್ತು. * ಈ ಹಿಂದೆ ಭಾರತ ಸರ್ಕಾರವು 1980 ರ ದಶಕದಲ್ಲಿ ವಿಮಾನಗಳನ್ನು ಫ್ರಾನ್ಸ್ನಿಂದ ಪಡೆದುಕೊಂಡಿತ್ತು, ಆದರೆ ಆ ವಿಮಾನಗಳು ಮೂರು ದಶಕಗಳಷ್ಟು ಹಳೆಯದಾಗಿದ್ದವು ಆದರೂ ಅವುಗಳು ಅತ್ಯಂತ ಶಕ್ತಿಶಾಲಿ ವಿಮಾನಗಳಾಗಿದ್ದವು. * ಭಾರತೀಯ ವಾಯುಪಡೆ (IAF) ಮಿರಾಜ್ -2000 ಯುದ್ಧ ವಿಮಾನಗಳು ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ವಿರುದ್ಧ ಬಾಲಾಕೋಟ್ ವಾಯುದಾಳಿಯಲ್ಲಿ ಪಾಲ್ಗೊಂಡು ಅಲ್ಲಿನ ಶಿಬಿರವನ್ನು ನಾಶಪಡಿಸಿದ್ದವು.