Job Description: * ಪ್ರತಿ ವರ್ಷವು ಸೆಪ್ಟೆಂಬರ್. 17 ರಂದು ರೋಗಿಯ ಸುರಕ್ಷತೆಯ ಕುರಿತು ಜಾಗತಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು. * ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅದರ ಅಂತರಾಷ್ಟ್ರೀಯ ಪಾಲುದಾರರು ಈ ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು ಆಚರಣೆ ಮಾಡುತ್ತಾರೆ. * ಪ್ರಸ್ತುತ 2021 ನೇ ವರ್ಷದ ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು 'ಸುರಕ್ಷಿತ ಹೆರಿಗೆ ಹಾಗೂ ನವಜಾತ ಶಿಶುಗಳ ಆರೈಕೆ' ಎಂಬ ಉಪಕ್ರಮದಡಿಯಲ್ಲಿ ಆಚರಣೆ ಮಾಡಲಾಗಿದೆ. * 2019 ರ ಮೇ ನಲ್ಲಿ ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು ಸ್ಥಾಪನೆ ಮಾಡಲಾಯಿತು. * WHO ಮಾಹಿತಿಯ ಪ್ರಕಾರ ಪ್ರತಿದಿನ ಅಂದಾಜು 810 ಮಹಿಳೆಯರು ಗರ್ಭಧಾರಣೆ ಹಾಗೂ ಹೆರಿಗೆಯ ಕಾರಣದಿಂದ ಮೃತರಾಗುತ್ತಿದ್ದಾರೆ, ಹಾಗೂ ಪ್ರತಿದಿನ ಅಂದಾಜು 6700 ಶಿಶುಗಳು ಸಾಯುತ್ತಿವೆ. * ಆದರೆ ಪ್ರತಿ ವರ್ಷವು 2 ಮಿಲಿಯನ್ ಶಿಶುಗಳ ಜನನ ವಾಗುತ್ತಿವೆ. * ಈ ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು ಎಲ್ಲಾ ಮಹಿಳೆಯರು ಹಾಗೂ ನವಜಾತ ಶಿಶುಗಳಿಗೆ ಅನಗತ್ಯ ಅಪಾಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡುತ್ತಾರೆ.