Job Description: * ಪ್ರಸ್ತುತ ಎರಡು ಭಾರತೀಯ ಯೋಜನೆಗಳನ್ನು ಪರಿಸರ ಪ್ರಶಸ್ತಿಯನ್ನು ಪಡೆಯಲು ಆಯ್ಕೆ ಮಾಡಲಾಗಿದೆ. * ಸ್ತುತ ಅರ್ಥ್ ಶಾಟ್(ಪರಿಸರ) ಪ್ರಶಸ್ತಿ ಆಯ್ಕೆಯಾದ ಮೊದಲ ಯೋಜನೆ, ಸೌರಶಕ್ತಿ ಚಾಲಿತ ಇಸ್ತ್ರಿ ಕಾರ್ಟ್ ಯೋಜನೆ, ಇದನ್ನು 14 ವರ್ಷದ ತಮಿಳುನಾಡು ಶಾಲಾ ವಿದ್ಯಾರ್ಥಿನಿ ವಿನಿಶಾ ಉಮಾಶಂಕರ್ ಅಭಿವೃದ್ಧಿಪಡಿಸಿದ್ದಾಳೆ. * ದೆಹಲಿಯ ಉದ್ಯಮಿ ಟಕಾಚಾರ್ ಅವರು 2 ನೇ ಯೋಜನೆಯನ್ನು ಅಭಿವೃದ್ಧಿಪಡಿಸಿದ್ದಾರೆ, ಇದನ್ನು 'ಕ್ಲೀನ್ ಅವರ್ ಏರ್ ಕ್ಯಾಟಗರಿ'ಯಲ್ಲಿ ನಾಮನಿರ್ದೇಶನ ಮಾಡಲಾಗಿದೆ, ಅದುವೇ ಕೃಷಿ ತ್ಯಾಜ್ಯ ಮರುಬಳಕೆ ಪರಿಕಲ್ಪನೆ ಯೋಜನೆ. * ಪರಿಸರ ಪ್ರಶಸ್ತಿಗಾಗಿ ಒಟ್ಟಾರೆ 15 ಯೋಜನೆಗಳನ್ನು ಆಯ್ಕೆ ಮಾಡಲಾಗಿದೆ. * ಈ ಪರಿಸರ ಪ್ರಶಸ್ತಿಯನ್ನು 2020 ರಲ್ಲಿ ಬ್ರಿಟನ್ನ ರಾಜಕುಮಾರ ವಿಲಿಯಂ ಹಾಗೂ ಡೇವಿಡ್ ಅಟೆನ್ಬರೋ ಅವರು ಆರಂಭಿಸಿದರು. * ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ಅಂದರೆ ಪ್ರತಿವರ್ಷ 5 ವಿಜೇತರಿಗೆ 2021 ರಿಂದ 2030 ರವರೆಗೆ ನೀಡಲಾಗುತ್ತದೆ, ಹಾಗೂ ಈ ಪ್ರಶಸ್ತಿಯನ್ನು ಇಂಗ್ಲೆಂಡ್ ನ ರಾಯಲ್ ಫೌಂಡೇಶನ್ ನೀಡುತ್ತದೆ.