Job Description: * ಪ್ರಸ್ತುತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ 45 ನೇ ಜಿಎಸ್ಟಿ(GST) ಕೌನ್ಸಿಲ್ ಸಭೆಯು ಉತ್ತರ ಪ್ರದೇಶದ ಲಕ್ನೋದಲ್ಲಿ ಜರುಗಿತು, ಈ ಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ್ನು GST ಅಡಿಯಲ್ಲಿ ತರುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಕೇರಳ ಹೈಕೋರ್ಟ್ ಪೆಟ್ರೋಲ್ ಮತ್ತು ಡೀಸೆಲ್ ಸಮಸ್ಯೆಯನ್ನು ಪ್ರಶ್ನೆ ಮಾಡಿತ್ತು ಈ ಕಾರಣದಿಂದಾಗಿ ಇದನ್ನು ಚರ್ಚಿಸಲಾಯಿತು, ಈ ಕೌನ್ಸಿಲ್ ಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು GST ವ್ಯಾಪ್ತಿಗೆ ತರದಿರಲು ನಿಧ್ರವನ್ನು ಕೈಗೊಂಡಿದೆ, ಹಾಗೂ ಇದೇ ಸಭೆಯಲ್ಲಿ ಕೋವಿಡ್-19 ಔಷಧಿಗಳ ಮೇಲೆ ರಿಯಾಯಿತಿ GST ದರಗಳನ್ನು ಘೋಷಣೆ ಮಾಡಲಾಯಿತು. * ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳ ಮೇಲಿನ ತೆರಿಗೆ ದರಗಳನ್ನು 12 ಪಿಸಿಯಿಂದ 5 ಪಿಸಿಗೆ ಕಡಿಮೆ ಮಾಡಲಾಗಿದೆ, ಹಾಗೂ ಜೈವಿಕ ಡೀಸೆಲ್'ನ್ನು ಡೀಸೆಲ್ ನೊಂದಿಗೆ ಬೆರೆಸಲು ಜಿಎಸ್ ಟಿ ದರವನ್ನು 12 ಪಿಸಿಯಿಂದ 5 ಪಿಸಿಗೆ ಕಡಿಮೆ ಮಾಡಲಾಗಿದೆ. * ಪ್ರಸ್ತುತ ಇ-ಕಾಮರ್ಸ್ ಆಪರೇಟರ್ ಸಂಸ್ಥೆಗಳಾಗಿರುವ ಸ್ವಿಗ್ಗಿ ಮತ್ತು ಜೊಮಾಟೊ GST ಅಡಿಯಲ್ಲಿ ಬರಲಿವೆ ಎಂದಿದ್ದಾರೆ.