Job Description: * 'ಏಕ್ ಪಹಲ್ ಡ್ರೈವ್' ಎಂಬ ಪ್ಯಾನ್-ಇಂಡಿಯಾ ವಿಶೇಷ ಅಭಿಯಾನವನ್ನು ಕಾನೂನು ಮತ್ತು ನ್ಯಾಯ ಸಚಿವಾಲಯವು ಮನೆ ಬಾಗಿಲಿಗೆ ನ್ಯಾಯ ವಿತರಣೆಗಾಗಿ ಆರಂಭಿಸಿದೆ. * ಪ್ರಸ್ತುತ ಟೆಲಿ-ಲಾ ಅಡಿಯಲ್ಲಿ ಸಾಮೂಹಿಕ ನೋಂದಣಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಹಾಗೂ ಈ ಅಭಿಯಾನವನ್ನು ನ್ಯಾಯಾಂಗ ಇಲಾಖೆ ಮತ್ತು ನಲ್ಸಾ ಪ್ರಾರಂಭಿಸಿವೆ. * ಪ್ರಸ್ತುತ ನ್ಯಾಯಾಂಗ ಇಲಾಖೆಯು ಭಾರತದಾದ್ಯಂತ 'ಏಕ್ ಪಹಲ್ ಡ್ರೈವ್' ಅಭಿಯಾನವನ್ನು ಆರಂಭಿಸಿದೆ, ಹಾಗೂ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಟೆಲಿ-ಲಾ ಅಡಿಯಲ್ಲಿ ಸಾಮೂಹಿಕ ನೋಂದಣಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಅಭಿಯಾನ ನಡೆಯಲಿದೆ, ಅಲ್ಲದೇ ಈ ಅಭಿಯಾನವು ಆರಂಭದಲ್ಲಿ 5480 ಫಲಾನುಭವಿಗಳ ನೋಂದಣಿ ಲಾಗಿನ್ ಮಾಡಿದೆ. * ಪ್ರಸ್ತುತ ಈ ಟೆಲಿ-ಲಾ ಪ್ಯಾನಲ್ ವಕೀಲರಿಂದ ಫಲಾನುಭವಿಗಳಿಗೆ ಮೊಕದ್ದಮೆ ಪೂರ್ವ ಸಲಹೆಗಳನ್ನೂ ನೀಡುತ್ತದೆ, ಇದು ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳು ಹಾಗೂ ಜಿಲ್ಲೆಗಳ ಗ್ರಾಮ ಪಂಚಾಯತ್ಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳು ಜಾಲವನ್ನು ಬಳಸಲಿವೆ ಎಂದು ತಿಳಿಸಿದ್ದಾರೆ, ಹಾಗೂ 672 ಜಿಲ್ಲೆಗಳಲ್ಲಿ ಕಾನೂನು ನೆರವು ಬಗ್ಗೆ ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದ್ದಾರೆ.