Job Description: * ಪ್ರಸ್ತುತ ನೀತಿ ಆಯೋಗವು ಭಾರತದ 112 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಉಚಿತ ಪ್ರವೇಶವನ್ನು ನೀಡಲು ಬೈಜು(Byju’s) ನೊಂದಿಗೆ ಪಾಲುದಾರಿಕೆ ಹೊಂದಿದೆ. * ಪ್ರಸ್ತುತ ಬೈಜು(Byju’s) ಉತ್ತಮ ಗುಣಮಟ್ಟದ ಶಿಕ್ಷಣದ ಪ್ರವೇಶವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಉನ್ನತ-ಗುಣಮಟ್ಟದ ಹಾಗೂ ಟೆಕ್-ಚಾಲಿತ ಕಲಿಕಾ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವನ್ನು ನೀಡಲಿದೆ. * ನೀತಿ ಆಯೋಗ ಮತ್ತು ಬೈಜು(Byju’s) ಅಭಿವೃದ್ಧಿ ಹೊಂದಿದ ಜಿಲ್ಲೆಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಎರಡು ಮುಖ್ಯ ಅಂಶಗಳನ್ನು ಹೊಂದಿದೆ. * BYJU’S ಕೆರಿಯರ್-ಪ್ಲಸ್ ಪ್ರೋಗ್ರಾಂ, ಈ ಕಾರ್ಯಕ್ರಮವು NEET ಮತ್ತು JEE ಗೆ ಹಾಜರಾಗುವ ಆಸಕ್ತಿ ಇಟ್ಟುಕೊಂಡಿರುವ 11 ಮತ್ತು 12 ನೇ ತರಗತಿಯ 3,000 ವಿದ್ಯಾರ್ಥಿಗಳಿಗೆ ಉನ್ನತ-ಗುಣಮಟ್ಟದ ಪರೀಕ್ಷಾ ಪೂರ್ವ ತರಬೇತಿ ನೀಡಲು ಸಿದ್ಧವಾಗಿದೆ. * ಸ್ವಯಂಪ್ರೇರಿತ ಕಾರ್ಯಕ್ರಮ, ಈ ಕಾರ್ಯಕ್ರಮವು ಎಲ್ಲರಿಗೂ ಶಿಕ್ಷಣ, ವಿದ್ಯಾರ್ಥಿಗಳು 3 ವರ್ಷಗಳ ಅವಧಿಗೆ ಬೈಜು(Byju’s) ನ ಕಲಿಕಾ ಅಪ್ಲಿಕೇಶನ್ನಿಂದ ವಿಷಯವನ್ನು ಸ್ವೀಕರಿಸಲು ಆಯ್ಕೆ ಮಾಡಬಹುದಾಗಿದೆ ಎಂದು ತಿಳಿಸಿದೆ. * ಉಚಿತ ಶಿಕ್ಷಣವನ್ನು ನೀಡಲು ವೃತ್ತಿ ಹಾಗೂ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳನ್ನು ಪೂರ್ವ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ, ಈ ಉಪಕ್ರಮವು ಅತ್ಯುತ್ತಮ ತರಗತಿ ಹಾಗೂ ಆನ್ಲೈನ್ ಕಲಿಕೆಯನ್ನು ಒದಗಿಸುತ್ತದೆ.