Job Description: * ಪ್ರಸ್ತುತ ಭಾರತೀಯ ಸ್ಟಾರ್ಟ್ ಅಪ್ ಮತ್ತು ಟೆಕ್ ಉದ್ಯಮಿಗಳಿಗಾಗಿ 'ಪ್ಲಾನೆಟೇರಿಯಮ್ ಇನ್ನೋವೇಶನ್ ಚಾಲೆಂಜ್' ನ್ನು ಮೈಗೊವ್ ಇಂಡಿಯಾ ಪ್ರಾರಂಭಿಸಿದೆ. * ಪ್ರಸ್ತುತ ಭಾರತದಿಂದ ಹೊರಬಂದ ಟೆಕ್ ಸಂಸ್ಥೆ ಹಾಗೂ ಸ್ಟಾರ್ಟ್ ಅಪ್ಗಳನ್ನು ಕೂಡಿಸಲು ಈ ಪ್ಲಾನೆಟೇರಿಯಮ್ ಚಾಲೆಂಜ್ ನ್ನು ಆರಂಭಿಸಲಾಗಿದೆ. * ಈ ಹಿಂದೆ 2019 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೈಗೋವ್(MyGov) ಸಹಭಾಗಿತ್ತ್ವದಲ್ಲಿ ಇಸ್ರೋ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿತ್ತು. * ಮೈಗೋವ್ ಇಂಡಿಯಾ ಪ್ಲಾನೆಟೇರಿಯಂ ನಾವೀನ್ಯತೆ ಸವಾಲನ್ನು ಇತ್ತೀಚೆಗೆ ಪ್ರಾರಂಭಿಸಿದೆ, ಹಾಗೂ ಅಕ್ಟೋಬರ್ 10 ರವರೆಗೆ ನೋಂದಣಿ ಮಾಡಲು ಅವಕಾಶ ನೀಡಿದೆ. * ಈ ಸ್ಪರ್ಧೆಯ ಪ್ರಥಮ, ದ್ವಿತೀಯ ಮತ್ತು ತೃತೀಯ ವಿಜೇತರಿಗೆ ಕ್ರಮವಾಗಿ 5 ಲಕ್ಷ, 3 ಲಕ್ಷ ಹಾಗೂ 2 ಲಕ್ಷ ರೂ.ಗಳ ನಗದು ಬಹುಮಾನವನ್ನು ನೀಡಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಕೇಂದ್ರ ಸರ್ಕಾರವು 2014 ರ ಜುಲೈ. 26 ರಂದು ಭಾರತದ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಭಾರತೀಯ ನಾಗರಿಕರು ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಮೈಗೋವ್'ನ್ನು ಆರಂಭಿಸಿದೆ.