Job Description: * ನೀತಿ ಆಯೋಗ, RMI ಮತ್ತು RMI ಇಂಡಿಯಾ ಸಹಯೋಗದೊಂದಿಗೆ ಶೂನ್ಯ ಅಭಿಯಾನವನ್ನು ಆರಂಭಿಸಲಾಗಿದೆ. * ಪ್ರಸ್ತುತ ಮಾಲಿನ್ಯ ರಹಿತ ವಿತರಣಾ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗ್ರಾಹಕರು ಮತ್ತು ಉದ್ಯಮದೊಂದಿಗೆ ಕೆಲಸ ಮಾಡುವ ಒಂದು ಉಪಕ್ರಮವೇ ಶೂನ್ಯ ಅಭಿಯಾನ. * ಈ ಶೂನ್ಯ ಅಭಿಯಾನದ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ, ಹಾಗೂ ಬಳಕೆ ಮತ್ತು ಮಾಲಿನ್ಯ ರಹಿತ ವಿತರಣೆಯ ಪ್ರಯೋಜನಗಳ ಬಗ್ಗೆ ಗ್ರಾಹಕರ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಆರಂಭಿಸಲಾಗಿದೆ. * ಈ ಶೂನ್ಯ ಅಭಿಯಾನದ ಅಡಿಯಲ್ಲಿ, ಕಾರ್ಪೊರೇಟ್ ಬ್ರ್ಯಾಂಡಿಂಗ್ ಮತ್ತು ಸರ್ಟಿಫಿಕೇಶನ್ ಪ್ರೋಗ್ರಾಂನ್ನು ಅಂತಿಮ ಮೈಲೇಜ್ ವಿತರಣೆಗಾಗಿ ಎಲೆಕ್ಟ್ರಿಕ್ ವಾಹನಗಳ ಕಡೆಗೆ ಬದಲಾಯಿಸುವ ಪ್ರಯತ್ನವನ್ನು ಗುರುತಿಸಲು ಆರಂಭಿಸಲಾಗಿದೆ. * ಪ್ರಸ್ತುತ ನಗರ ಸರಕು ವಲಯದಿಂದ ಮಾಲಿನ್ಯವನ್ನು ತಗೆದುಹಾಕುವದೇ ಈ ಶೂನ್ಯ ಅಭಿಯಾನದ ಮುಖ್ಯ ಉದ್ದೇಶವಾಗಿದೆ. * ಪ್ರಸ್ತುತ ಭಾರತದಲ್ಲಿನ ಸರಕು ಸಾಗಾಣಿಯ ವಾಹನಗಳಿಗೆ ಸಂಬಂಧಿತ CO2 ಹೊರಸೂಸುವಿಕೆಯ 10% ರಷ್ಟಿದೆ, ಹಾಗೂ ಇದೇ 2030 ರ ವೇಳೆಗೆ 114% ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ, ಆದರೆ ಎಲೆಕ್ಟ್ರಿಕ್ ವಾಹನಗಳು CO2 ವನ್ನು ಹೊರಸೂಸುವುದಿಲ್ಲ ಇದರಿಂದಾಗಿ ಗಾಳಿಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಎಲೆಕ್ಟ್ರಿಕ್ ವಾಹನಗಳು ಕೊಡುಗೆ ನೀಡಿದಂತಾಗುತ್ತದೆ.