Job Description: * ಪ್ರಸ್ತುತ ಭಾರತೀಯ ಸೇನಾ ತಂಡವು ಶಾಂತಿ ಮಿಷನ್ -2021 ಭಾರತೀಯ ವಾಯುಪಡೆಯ 38 ಸಿಬ್ಬಂದಿ ಸೇರಿ ಒಟ್ಟು 200 ಸಿಬ್ಬಂದಿಯ ಶಸ್ತ್ರಾಸ್ತ್ರ ಸಂಯೋಜಿತ ಪಡೆಗಳು ಈ ವ್ಯಾಯಾಮದಲ್ಲಿ ಪಾಲ್ಗೊಳ್ಳಲಿವೆ. * ಈ ವ್ಯಾಯಾಮ SCO ಶಾಂತಿಯುತ ಮಿಷನ್'ನ್ನು ಸೆಪ್ಟೆಂಬರ್ 13 ರಿಂದ 25 ರವರೆಗೆ ನೈಋತ್ಯ ರಷ್ಯಾದ ಒರೆನ್ಬರ್ಗ್ ಪ್ರದೇಶದಲ್ಲಿ ನಡೆಯುತ್ತಿದೆ. * ಈ SCO ಶಾಂತಿಯುತ ಮಿಷನ್ ಒಂದು ಬಹುಪಕ್ಷೀಯ ಹಾಗೂ ಜಂಟಿ ಭಯೋತ್ಪಾದನೆ ವಿರುದ್ಧ ನಡೆಸುವ ವ್ಯಾಯಾಮವಾಗಿದೆ. * ಈ SCO ಶಾಂತಿಯುತ ಮಿಷನ್'ನ್ನು ಶಾಂಘೈ ಸಹಕಾರ ಸಂಸ್ಥೆ (SCO) ಸದಸ್ಯ ರಾಷ್ಟ್ರಗಳ 'ಮಿಲಿಟರಿ ರಾಜತಾಂತ್ರಿಕತೆ' ಅಡಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. * ಭಾರತೀಯ ದಳವನ್ನು ಎರಡು ಐಎಲ್ -76 ವಿಮಾನಗಳಿಂದ ವ್ಯಾಯಾಮ ಪ್ರದೇಶಕ್ಕೆ ಸೇರ್ಪಡೆ ಮಾಡಲಾಗಿದೆ, ಈ ವ್ಯಾಯಾಮವು ಎಲ್ಲಾ ಸಶಸ್ತ್ರ ಪಡೆಗಳಿಗೆ ನಗರ ಸನ್ನಿವೇಶದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಮತ್ತು ಬಹುರಾಷ್ಟ್ರೀಯ ಮತ್ತು ಜಂಟಿ ಪರಿಸರದಲ್ಲಿ ತರಬೇತಿ ನೀಡಲು ಅವಕಾಶವನ್ನು ಒದಗಿಸುತ್ತದೆ, ಹಾಗೂ ಇದೊಂದು ಮಿಲಿಟರಿ ಸಂವಹನ ಮತ್ತು ಭಯೋತ್ಪಾದನೆ ವಿರುದ್ಧದ ಜಾಗತಿಕ ಸಹಕಾರದ ಒಂದು ಮಹತ್ವದ ಸಂಘಟನೆಯಾಗಿದೆ ಎಂದು ತಿಳಿಸಿದ್ದಾರೆ.