Job Description: * ಪ್ರಸ್ತುತ ಭಾರತ ಹಾಗೂ ಸಿಂಗಾಪುರ್ ಏಕೀಕೃತ ಪಾವತಿ ಇಂಟರ್ಫೇಸ್ (UPI) ಹಾಗೂ ಪೇನೌ(PayNow) ಲಿಂಕ್ ಮಾಡುವುದನ್ನು ಘೋಷಣೆ ಮಾಡಿವೆ, ಇದರಿಂದಾಗಿ ಪ್ರಸ್ತುತ ಬಳಕೆದಾರರಿಗೆ ತ್ವರಿತ, ಕಡಿಮೆ ಬೆಲೆಯ ನಿಧಿ ವರ್ಗಾವಣೆಯನ್ನು ಮಾಡಲು ಸಹಾಯ ಮಾಡಿಕೊಡಲಾಗುತ್ತದೆ ಎಂದು ತಿಳಿಸಲಾಗಿದೆ. * ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರ (MAS)ವು ಭಾರತ-ಸಿಂಗಾಪುರ ದೇಶಗಳ ವೇಗದ ಪಾವತಿ ವ್ಯವಸ್ಥೆಗಳನ್ನು ಲಿಂಕ್ ಮಾಡುವ ಯೋಜನೆಯನ್ನು ಘೋಷಸಿವೆ, ಈ ಲಿಂಕ್ಡ್ ಪೇಮೆಂಟ್ ಇಂಟರ್ಫೇಸ್ ಜುಲೈ 2022 ರೊಳಗೆ ಕಾರ್ಯರೋಪಕ್ಕೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ. * UPI ಎಂಬುವುದು ಮೊಬೈಲ್ ಆಧಾರಿತ ವೇಗದ ಪಾವತಿ ವ್ಯವಸ್ಥೆಯಾಗಿದೆ, UPI ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ, ಹಾಗೂ ವ್ಯಕ್ತಿಯಿಂದ ವ್ಯಾಪಾರಿಗೆ ಹಣವನ್ನು ಕಳುಹಿಸಲು ಅಥವಾ ಸ್ವೀಕರಿಸಲು ಇದು ಸಹಾಯ ಮಾಡುತ್ತದೆ. * PayNow: ಎಂಬುವುದು ಸಿಂಗಾಪುರದ ವೇಗದ ಪಾವತಿ ವ್ಯವಸ್ಥೆಯಾಗಿದೆ, ಇದರಿಂದ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆ, ಸಿಂಗಾಪುರ್ NRIC/FIN, ಅಥವಾ VPA ಅನ್ನು ಬಳಸಿ ಒಂದು ಬ್ಯಾಂಕ್ ಅಥವಾ ಇ-ವ್ಯಾಲೆಟ್ ಖಾತೆಯಿಂದ ಮತ್ತೊಂದು ಖಾತೆಗೆ ವೇಗವಾಗಿ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಹಾಯ ಮಾಡುತ್ತದೆ.