Job Description: * ವಿಶ್ವಸಂಸ್ಥೆಯು ಪ್ರತಿ ವರ್ಷ ಸೆಪ್ಟೆಂಬರ್ 12 ರಂದು ದಕ್ಷಿಣ-ದಕ್ಷಿಣ ಸಹಕಾರಕ್ಕಾಗಿ ಅಂತರರಾಷ್ಟ್ರೀಯ ದಿನವನ್ನು ಆಚರಣೆ ಮಾಡಲಾಗುತ್ತದೆ. * ವಿಶ್ವಸಂಸ್ಥೆಯು ಅಭಿವೃದ್ಧಿಯಾಗುತ್ತಿರುವ ದೇಶಗಳ ನಡುವಿನ ಸಹಕಾರಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ. * ಇದು ದಕ್ಷಿಣ ಪ್ರದೇಶದಲ್ಲಿರುವ ದೇಶಗಳ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಗಳಿಗೆ ಒಂದು ಉಪಕ್ರಮವಾಗಿದೆ. * ದಕ್ಷಿಣ-ದಕ್ಷಿಣ ಸಹಕಾರ ಎಂದರೇ: ದಕ್ಷಿಣ-ದಕ್ಷಿಣ ಸಹಕಾರವು ಜಾಗತಿಕ ದಕ್ಷಿಣದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ 'ತಾಂತ್ರಿಕ ಸಹಕಾರ'ವನ್ನು ಸೂಚಿಸುತ್ತದೆ. * ಈ ದಕ್ಷಿಣ-ದಕ್ಷಿಣ ಸಹಯೋಗವು ಅಭಿವೃದ್ಧಿಯಾಗುತ್ತಿರುವ ರಾಷ್ಟ್ರಗಳಿಗೆ ತಮ್ಮ ಅಭಿವೃದ್ಧಿ ಗುರಿಗಳನ್ನು ತಲುಪಲು ಜ್ಞಾನ, ಕೌಶಲ್ಯ ಹಾಗೂ ಸಂಪನ್ಮೂಲಗಳನ್ನು ವಿನಿಮಯ ಮಾಡಿಕೊಳ್ಳಲು ಸಹಾಯವನ್ನು ಒದಗಿಸಿಕೊಡುತ್ತದೆ. * ದಕ್ಷಿಣ-ದಕ್ಷಿಣ ಸಹಕಾರದ ಉದ್ದೇಶಗಳು: - ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸ್ವಾವಲಂಬನೆಯನ್ನು ಅಧಿಕಗೊಳಿಸುವುದು ಹಾಗೂ ಅಭಿವೃದ್ಧಿ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದು. - ಅನುಭವದ ವಿಚಾರಗಳನ್ನೂ ವಿನಿಮಯ ಮಾಡಿಕೊಂಡು ಸ್ವಾವಲಂಬನೆಗೆ ಉತ್ತೇಜನ ನೀಡುವುದು. - ಅಂತರರಾಷ್ಟ್ರೀಯ ಆರ್ಥಿಕ ಚಟುವಟಿಕೆಗಳಲ್ಲಿ ಅಧಿಕವಾಗಿ ಪಾಲ್ಗೊಳ್ಳುವುದು, ಕನಿಷ್ಠ ಅಭಿವೃದ್ಧಿ ಹೊಂದಿದ ದೇಶಗಳ ಸಮಸ್ಯೆಗಳನ್ನು ಹಾಗೂ ಅಗತ್ಯ ಅವಶ್ಯಕತೆಗಳನ್ನು ಪರಿಗಣಿಸುವುದು.