Job Description: * ಪ್ರಸ್ತುತ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯನ್ನು ಭಾರತದ 36,000 ಹಳ್ಳಿಗಳಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಆರಂಭಿಸಲಿದೆ. * ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಸುಮಾರು 50 ಪ್ರತಿಶತ ಬುಡಕಟ್ಟು ಜನಸಂಖ್ಯೆ ಹೊಂದಿರುವ ಗ್ರಾಮಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. * ಪ್ರಸ್ತುತ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಅಸ್ಸಾಂನ ಸುಮಾರು 1700 ಬುಡಕಟ್ಟು ಗ್ರಾಮಗಳನ್ನು ಮಾದರಿ ಗ್ರಾಮವಾಗಿ ಪರಿವರ್ತಿಸಲಾಗುತ್ತದೆ, ಹಾಗೂ 60 ಸಾವಿರ ಜನರಿಗೆ ಅನುಕೂಲವಾಗುವಂತೆ 184 ಹೊಸ ವನ್ ಧನ್ ಕೇಂದ್ರವನ್ನು ನಿರ್ಮಿಸಲಾಗುವದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. * 'ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಂಸ್ಥೆಯು' ರಾಷ್ಟ್ರೀಯ ಮಟ್ಟದಲ್ಲಿ ತಾಂತ್ರಿಕ ಸಂಪನ್ಮೂಲ ಬೆಂಬಲವನ್ನು ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗೆ ನೀಡಲಿದೆ ಎಂದು ತಿಳಿಸಲಾಗಿದೆ. * ಪ್ರಸ್ತುತ ಆದರ್ಶ್ ಗ್ರಾಮವೆಂದು ಘೋಷಿಸಬೇಕಾದರೆ, ಆ ಗ್ರಾಮಗಳು ಮೂರು ವರ್ಷಗಳೊಳಗೆ ಕನಿಷ್ಠ ಮೂರು ಗುರಿಗಳನ್ನು ಸಾಧಿಸಬೇಕು. - ಬಡತನ ನಿರ್ಮೂಲನೆ ಮತ್ತು ಮೂರು ವರ್ಷಗಳಲ್ಲಿ ಅದರ ಸಂಭವವನ್ನು 50% ರಷ್ಟು ಕಡಿಮೆಗೊಳಿಸುವುದು. - 100% ದಾಖಲಾತಿ ಮತ್ತು ಪ್ರಾಥಮಿಕ ಹಂತದಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವುದು. - ಶಿಶು ಮರಣ ಪ್ರಮಾಣ ಮತ್ತು ತಾಯಂದಿರ ಮರಣ ದರ ಇಳಿಕೆ. - ಗ್ರಾಮಗಳು 100 % ಬಯಲು ಶೌಚ ಮುಕ್ತವಾಗಬೇಕು. - ಸುಸ್ಥಿರ ಆಧಾರದ ಮೇಲೆ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯಕ್ಕೆ ಪ್ರವೇಶ. - ಗರ್ಭಿಣಿ ಮಹಿಳೆಯರಿಗೆ 100% ಸಾಂಸ್ಥಿಕ ಹೆರಿಗೆಗಳು - ಮಕ್ಕಳ ಸಂಪೂರ್ಣ ರೋಗನಿರೋಧಕ - ಗ್ರಾಮಕ್ಕೆ ಎಲ್ಲಾ ಹವಾಮಾನದ ರಸ್ತೆ ಸಂಪರ್ಕ - 100% ಸಾವು ಮತ್ತು ಜನನದ ನೋಂದಣಿ - ಬಾಲ್ಯ ವಿವಾಹಗಳು ಮತ್ತು ಬಾಲಕಾರ್ಮಿಕ ಪದ್ಧತಿ ಇಲ್ಲ - ಮದ್ಯ ಮತ್ತು ಮಾದಕ ವಸ್ತುಗಳ ಸಾರ್ವಜನಿಕ ಬಳಕೆ ಇಲ್ಲ - ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಮನೆಗಳ 100% ಹಂಚಿಕೆ.