Job Description: * ಪ್ರಸ್ತುತ ರಾಷ್ಟ್ರಮಟ್ಟದ ಶೂಟರ್ ಕ್ರೀಡಾಪಟು ನಮನ್ವೀರ್ ಸಿಂಗ್ ಬ್ರಾರ್ ಅವರು ಮೊಹಾಲಿಯ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. * ಶೂಟರ್ ನಮನ್ವೀರ್ ಸಿಂಗ್ ಬ್ರಾರ್ ಅವರು ತಮ್ಮ ತಲೆಗೆ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ, ಆದರೆ ಅಧಿಕೃತ ಮಾಹಿತಿಯು ಮರಣೋತ್ತರ ಪರೀಕ್ಷೆಯ ಬಳಿಕ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. * ಶೂಟರ್ ನಮನ್ವೀರ್ ಸಿಂಗ್ ಬ್ರಾರ್ ಅವರು ಇತ್ತೀಚಿಗೆ ದಕ್ಷಿಣ ಕೊರಿಯಾದಲ್ಲಿ ನಡೆದಿರುವ ಜಾಗತಿಕ ವಿಶ್ವವಿದ್ಯಾಲಯಗಳ ಡಬಲ್ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಕಂಚಿಕ ಪದಕ ಜಯಿಸಿದ್ದರು. * ಟ್ರ್ಯಾಪ್ ಶೂಟರ್ ನಮನ್ವೀರ್ ಸಿಂಗ್ ಬ್ರಾರ್ ಅವರು ಈ ವರ್ಷದ ಮಾರ್ಚ್ ನಲ್ಲಿ ನಡೆದ ದೆಹಲಿ ಶೂಟಿಂಗ್ ವಿಶ್ವಕಪ್ ನ ಕನಿಷ್ಠ ಅರ್ಹತಾ ಸ್ಕೋರ್ ವಿಭಾಗದಲ್ಲಿ 4 ನೇ ಸ್ಥಾನವನ್ನು ಪಡೆದುಕೊಂಡಿದ್ದರು.