Job Description: * ಪ್ರಸ್ತುತ ಅಮೆರಿಕ ಸಂಸದ ರಾಬರ್ಟ್ ಮೆಂಡೇಜ್ ಅವರು ಅಮೆರಿಕ ಹಾಗೂ ಭಾರತ ರಾಷ್ಟ್ರಗಳ ಮಧ್ಯೆ ಹವಾಮಾನ ಹಾಗೂ ಶುದ್ಧ ಇಂಧನ ಕ್ಷೇತ್ರದಲ್ಲಿ ಸಹಕಾರವನ್ನು ಅಭಿವೃದ್ಧಿಗೊಳಿಸುವ ಮಸೂದೆಯೊಂದನ್ನು ಅಮೇರಿಕದ ಸೆನೆಟ್ನಲ್ಲಿ ಮಂಡಿನೆ ಮಾಡಿದ್ದಾರೆ. * ಈ ಮಸೂದೆ ಮಂಡನೆಯೊಂದಿಗೆ ಉಭಯ ರಾಷ್ಟ್ರಗಳು ಜತೆಯಾಗಿ ಕೆಲಸ ಮಾಡುವದರಿಂದ ಉತ್ತಮ ಫಲಿತಾಂಶ ಸಿಗಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಭಾರತ ದೇಶದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪರಿಗಣಿಸಿ ಶುದ್ಧ ಇಂಧನ ಪಾಲುದಾರಿಕೆಯನ್ನು ಬಲಪಡಿಸಲು ಅಮೆರಿಕ-ಭಾರತ ದೇಶಗಳಿಗೆ ಈ ಮಸೂದೆಯು ನೆರವಾಗಲಿದೆ ಎಂದು ತಿಳಿಸಿದ್ದಾರೆ.