Job Description: * ಪ್ರಸ್ತುತ ಜೊಮಾಟೊ ಸಹ ಸಂಸ್ಥಾಪಕ ಗೌರವ್ ಗುಪ್ತಾ ಅವರು ಜೊಮಾಟೊ ಸಂಸ್ಥೆ ತೊರೆದಿದ್ದಾರೆ, ಹಾಗೂ ಇವರು ಜೊಮಾಟೊ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. * ಗೌರವ್ ಗುಪ್ತಾ ಅವರನ್ನು 2019 ರಲ್ಲಿ ಅಧಿಕೃತವಾಗಿ ಜೊಮಾಟೊ ಸಹ ಸಂಸ್ಥಾಪಕ ಎಂದು ಘೋಷಣೆ ಮಾಡಲಾಗಿತ್ತು. * ಜೊಮಾಟೊ ಜನಪ್ರಿಯ ಆಹಾರ ಪೂರೈಕೆ ಸಂಸ್ಥೆಯಾಗಿದೆ. * ಗೌರವ್ ಗುಪ್ತಾ ಅವರು ಜೊಮಾಟೊ ಸಂಸ್ಥಾಪಕ ಹಾಗೂ ಸಿಇಓ ದೀಪಿಂದರ್ ಗೋಯಲ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. * ಜೊಮಾಟೊ ಭಾರತೀಯ ಬಹುರಾಷ್ಟ್ರೀಯ ರೆಸ್ಟೋರೆಂಟ್ ಸಂಗ್ರಾಹಕ ಆಹಾರ ವಿತರಣಾ ಸಂಸ್ಥೆಯಾಗಿದೆ. * ಜೊಮಾಟೊ ಸಂಸ್ಥೆಯನ್ನು ದೀಪೀಂದರ್ ಗೋಯಲ್, ಪಂಕಜ್ ಚಡ್ಡಾ ಮತ್ತು ಗುಂಜನ್ ಪಾಟಿದಾರ್ ಅವರು 2008 ರಲ್ಲಿ ಸ್ಥಾಪಿಸಿದ್ದಾರೆ. * ಜೊಮಾಟೊ ಸಂಸ್ಥೆಯು ಹರಿಯಾಣ ರಾಜ್ಯದ ಗುರುಗ್ರಾಮ ಎಂಬಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ, ಹಾಗೂ 5,000 ಕ್ಕಿಂತಲೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ.